
ರಾಯಚೂರು : ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚು ಅತ್ಯವಶ್ಯಕವೆನಿಸಿರುವ ವೀಳ್ಯದೆಲೆಗೆ ಇದೀಗ ಚಿನ್ನದ ಬೆಲೆ ಬಂದಿದೆ. ಪ್ರತಿ 100 ಎಲೆಯ ಒಂದು ಕಟ್ಟು ವೀಳ್ಯದೆಲೆಗೆ 10 ರಿಂದ 16 ಸಾವಿರ ರೂಪಾಯಿವರೆಗೆ ಮಾರಾಟವಾಗುತ್ತಿದ್ದು ಇದು ಜಿಲ್ಲೆಯಲ್ಲಿ ಸಾರ್ವಕಾಲಿಕ ದಾಖಲೆ ಎನಿಸಿದೆ.
ಈ ಹಿಂದೆ ವೀಳ್ಯದೆಲೆ ಒಂದು ಪುಟ್ಟಿಗೆ 3 ಸಾವಿರ ರೂಪಾಯಿ ದೊರೆತರೆ ಹೆಚ್ಚು ಎಂಬಂತ್ತಿತ್ತು. ಆದರೆ ಇದೀಗ ಈ ಬೆಲೆ 6 ರಿಂದ 8 ಸಾವಿರ ಸಿಗುತ್ತಿದೆ. ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚಿನ ಬೆಲೆಗೆ ವೀಳ್ಯದೆಲೆ ಮಾರಾಟವಾಗುತ್ತಿದೆ. ಇಳುವರಿ ಕಡಿಮೆಯಾಗಿರುವುದು ವೀಳ್ಯದೆಲೆ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ. ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ಅಧಿಕ ಮಳೆ ಸುರಿದ ಪರಿಣಾಮ ಎಲೆ ತೋಟಗಳಿಗೆ ಹಾನಿಯಾಗಿದೆ ಎಂದು ರೈತರು ಹೇಳುತ್ತಿದ್ದಾರೆ. ಆದರೆ ಇದೀಗ ಒಂದು ವಾರದಲ್ಲಿ ಒಂದು ಕಟ್ಟಿನ ಬೆಲೆ 50 ರಿಂದ 60 ರೂಪಾಯಿ ಹೆಚ್ಚಳ ಆಗುವ ಮೂಲಕ ಗ್ರಾಹಕರಿಗೆ ಹೊರೆಯಾದಂತಾಗಿದೆ.
ಈ ವರ್ಷ ಇಳುವರಿ ಕಡಿಮೆ ಇರುವುದರಿಂದ ಜಿಲ್ಲೆಯಾದ್ಯಂತ ವೀಳ್ಯದೆಲೆ ಬೆಲೆ ಹೆಚ್ಚಾಗಿದೆ. ಒಂದು ಬುಟ್ಟಿ ವೀಳ್ಯದೆಲೆಗೆ ಸಾವಿರ ರೂಪಾಯಿ ಹೆಚ್ಚಾಗಿದೆ. ಇದರಿಂದ ನಾವು 50 ರೂಪಾಯಿ ಹೆಚ್ಚಳಕ್ಕೆ ಮಾರಾಟ ಮಾಡುತ್ತಿದ್ದು, ಇದು ಗ್ರಾಹಕರಿಗೆ ತೊಂದರೆಯಾಗಿದೆ ಎಂದು ವೀಳ್ಯದೆಲೆ ವ್ಯಾಪಾರಿ ಖಾಜಾ ಮಹಿಮುದ್ದೀನ್ ಹೇಳಿದರು. ರಾಜ್ಯದಲ್ಲಿಯೇ ಹೆಸರುವಾಸಿಯಾದ ನಮ್ಮೂರಿನ ವೀಳ್ಯದೆಲೆಗೆ ವ್ಯವಸ್ಥಿತವಾದ ಮಾರುಕಟ್ಟೆಯನ್ನು ನಿರ್ಮಿಸದಿರುವುದು ನೋವಿನ ಸಂಗತಿಯಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಎಪಿಎಂಸಿ ಉತ್ತಮ ಮಾರುಕಟ್ಟೆ ನಿರ್ಮಿಸಲು ಮುಂದಾಬೇಕು ಎಂದು ಎಲೆ ಬೆಳೆಗಾರ ಬಸವನಗೌಡ ಹೇಳಿದರು.
![]() |
![]() |
![]() |
![]() |
![]() |
[ays_poll id=3]