
K2 ಪೊಲಿಟಿಕಲ್ ನ್ಯೂಸ್ : ಭ್ರಷ್ಟಾಚಾರ ಕಾಂಗ್ರೆಸ್ ನ ಅವಿಭಾಜ್ಯ ಅಂಗ, ಬೆಂಗಳೂರನ್ನು ಹಾಳು ಮಾಡಿದವರು ಕಾಂಗ್ರೆಸ್ಸಿನವರು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ಸಿಂದ ಕಿಡಿ ಕಾರಿದ್ದಾರೆ.
ಹತ್ತು ಹದಿನೈದು ಜನ ಸೇರಿ 300 ಕಡೆ ಪ್ರತಿಭಟನೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಒತ್ತುವರಿಯಾಗಲು, ರಾಜಕಾಲುವೆ ಮುಚ್ಚಲು, ಅದರ ಹೆಸರಿನಲ್ಲಿ ಭ್ರಷ್ಟಾಚಾರ ಮಾಡಲು ಹತ್ತು ಹಲವಾರು ಹಗರಣಗಳು ಅವರ ಕಾಲದಲ್ಲಿ ಆಗಿವೆ. ಅದನ್ನು ಮುಚ್ಚಿಹಾಕಲು ಈ ರೀತಿ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಕಾಂಗ್ರೆಸ್ ನ ಅವಿಭಾಜ್ಯ ಅಂಗ. ಕಾಂಗ್ರೆಸ್ ನ ನಾಯಕರು ಭ್ರಷ್ಟಾಚಾರದಲ್ಲಿ ಪಿ.ಹೆಚ್.ಡಿ ಪಡೆದಿದ್ದಾರೆ. ಅವರು ಈ ರೀತಿಯ ನಾಟಕ ಮಾಡುತ್ತಾರೆ.
ಜನ ಇದನ್ನು ಒಪ್ಪುವುದಿಲ್ಲ. ಮುನ್ನೂರು ಕಡೆ ಮಾಡುತ್ತಿರುವುದು ಒಂದು ಕಡೆ ಯಾರೂ ಬರೋಲ್ಲ ಎಂದು. ಅಲ್ಲಲ್ಲಿ ಅವರ ಕಾರ್ಯಕರ್ತರನ್ನು ನಿಲ್ಲಿಸಿ ಮಾಡುವುದು. ಲೋಕಾಯುಕ್ತ ಮುಚ್ಚಿದ ಇವರು ಭ್ರಷ್ಟಾಚಾರಕ್ಕೆ ಕೊಡುಗೆ ನೀಡಿದ್ದಾರೆ. ಅದಕ್ಕೆ ರಕ್ಷಣೆ ನೀಡಿದವರು. ಅವರ ವಿರುದ್ಧದ ಎಲ್ಲಾ ದೂರುಗಳನ್ನು ಎ ಸಿಬಿ ಗೆ ಕೊಟ್ಟು ಮುಚ್ಚಿಹಾಕಿದ್ದಾರೆ. ಅವೆಲ್ಲವೂ ಲೋಕಾಯುಕ್ತಕ್ಕೆ ಬಂದು ತನಿಖೆಯಾಗುವುದು ಎಂದರು.
ಬಹಿರಂಗ ಚರ್ಚೆ ಮಾಡಲಿ ಎಂದು ಕಾಂಗ್ರೆಸ್ ಆಹ್ವಾನಿಸಿರುವ ಬಗ್ಗೆ ಉತ್ತರಿಸಿ ಬಹಿರಂಗ ಚರ್ಚೆ ಎನ್ನುವುದು ಹಾಸ್ಯಾಸ್ಪದ. ವಿಧಾನಸಭೆಯಲ್ಲಿ ಚರ್ಚೆಗೆ ನೋಟೀಸು ನೀಡಿದಾಗ ಓಡಿ ಹೋದರು. ಬೆಳಗಾವಿಯಲ್ಲಿ ಒಂದು ವಾರದ ಮುನ್ನ ನೋಟೀಸು ಕೊಟ್ಟರು. ಕೊನೆ ಗಳಿಗೆವರೆಗೂ ಮಾತನಾಡಲಿಲ್ಲ. ಅದಕ್ಕಿಂತ ಬಹಿರಂಗ ಸಭೆ ಇನ್ಯಾವುದು ಬೇಕು. ಇಡೀ ರಾಜ್ಯವೇ ನೋಡುತ್ತಿರುತ್ತದೆ. ವೇದಿಕೆಯಾಗಿರುವುದೇ ಅದಕ್ಕೆ. ಅಲ್ಲಿ ಚರ್ಚಿಸದೆ ಇಲ್ಲಿ ಮಾತನಾಡುವುದು ಪ್ರಯೋಜನವಿಲ್ಲ. ನಾವು ವಿಧಾನಸಭೆಯಲ್ಲಿ ಎದುರಿಸಲು ಶಕ್ತಿಯಿದೆ. ಜನರ ಬಳಿಯೂ ತೆಗೆದುಕೊಂಡು ಹೋಗುವ ಶಕ್ತಿಯಿದೆ ಹತಾಶರಾಗಿ ಈ ರೀತಿ ಮಾಡುತ್ತಿದ್ದಾರೆ ಎಂದರು.
![]() |
![]() |
![]() |
![]() |
![]() |
[ays_poll id=3]