ಸಮ ಸಮಾಜ ನಿರ್ಮಾಣ ಮಾಡಲು ತನ್ನ ಜೀವನವನ್ನೆ ಮುಡಿಪಾಗಿಟ್ಟ ಬಾಬಾ ಸಾಹೇಬ್
![]() |
![]() |
![]() |
![]() |
![]() |
ಸಿರವಾರ : ಭಾರತದಲ್ಲಿರುವ ಜಾತಿ ವ್ಯವಸ್ತೆ, ಲಿಂಗ ಹಾಗೂ ಜಾತಿ ತಾರತಮ್ಯ ಹೋಗಲಾಡಿಸಿ ಸಮ ಸಮಾಜ ನಿರ್ಮಾಣ ಮಾಡುವಲ್ಲಿ ತನ್ನ ಜೀವನವನ್ನೆ ಮುಡಿಪಾಗಿ ಇಟ್ಟಿದ ಮಹಾನ್ ಮಾನವತಾ ವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಎಲ್ಲಾರನ್ನೂ ಬಿಟ್ಟು ಹೋಗಿರುವ ದಿನ ಇಂದು ಎಂದು ಧಮ್ಮ ದೀಪ ಚಾಲನಾ ಸಮಿತಿ ಅದ್ಯಕ್ಷ ಹನುಮಂತ ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ 66 ನೇ ಮಹಾ ಪರಿ ನಿರ್ವಾಹಣ ಅಂಗವಾಗಿ ಇಂದು ಪಟ್ಡಣದ ಮುಖ್ಯರಸ್ತೆಯಲ್ಲಿರುವ ನಾಮಪಲಕದ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಒಂದು ನಿಮಿಷ ಮೌನಾಚರಣೆ ಮಾಡಿ ನಂತರ ಮಾತನಾಡಿದ ಅವರು ಸಂವಿಧಾನ ಶಿಲ್ಪಿ, ಮಹಾಮಾನವತಾವಾದಿ ಹಾಗೂ ಸಮಾನತೆಯ ಹರಿಕಾರರಾದ ಭಾರತ ರತ್ನ ಬಾಬಾಸಾಹೇಬ್ ಡಾ ಬಿ.ಆರ್.ಅಂಬೇಡ್ಕರ್ ಅವರ 66ನೇ ಮಹಾಪರಿನಿರ್ವಾಣ ದಿನ. ಅಂಬೇಡ್ಕರ್ ಅವರು ಮಹಿಳೆಯರು ಹಕ್ಕುಗಳು, ಸಮಾತೆ ಹಾಗೂ ಶೋಷಿತ ವರ್ಗಗಳ ಹಕ್ಕಿಗಾಗಿ ಹೋರಾಡಿದ ಸಾಮಾಜದ ಮಹಾನ್ ಸುಧಾಕರು,ಅಸ್ಪೃಶ್ಯತೆ ನಿವಾರಿಸಿ ಸಮ ಸಮಾಜ ನಿರ್ಮಾಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟವರು, ಜಗತ್ತಿನ ಆತಿದೊಡ್ಡ ಪ್ರಜಾಪ್ರಭುತ್ವವುಳ್ಳ ಭಾರತದ ಸಂವಿಧಾನವನ್ನು ರಚಿಸಿದವರು, ಮಹಾನ್ ಮಾನವತಾವಾದಿ, ಒಬ್ಬ ಖ್ಯಾತ ನ್ಯಾಯವಾದಿ, ಆರ್ಥಿಕ ತಜ್ಞ, ರಾಜಕೀಯ ಮತ್ತು ಸಮಾಜ ಸುಧಾರಕರಾಗಿ ಕೂಡ ಗುರುತಿಸಿಕೊಂಡಿದ್ದರು. ದೇಶದಲ್ಲಿ ದಲಿತ ಬೌದ್ಧ ಚಳವಳಿಗಳು, ಮಹಿಳೆಯರು, ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದರು.
ಬೌದ್ಧ ಧರ್ಮದಲ್ಲಿ ಪರಿನಿರ್ವಾಣ ಎಂದರೆ ತೀರಿಹೋದ ನಂತರ ನಿರ್ವಾಣವಾಗುವುದು, ಜೀವಿತಾವಧಿಯಲ್ಲಿ ನಿರ್ವಾಣವನ್ನು ಪಡೆದವರು ಎಂದರ್ಥ. ಅಂದರೆ ಈ ಭೌತಿಕ ಜಗತ್ತಿನಿಂದ, ಕರ್ಮ ಮತ್ತು ಮರುಹುಟ್ಟಿನಿಂದ ಬಿಡುಗಡೆ ಹೊಂದುವುದು, ಡಾ.ಬಿ.ಆರ್ ಅಂಬೇಡ್ಕರ್ ಅವರು ನಿಧನ ಹೊಂದಿದ ದಿನ ಪ್ರತಿವರ್ಷ ಡಿಸೆಂಬರ್ 6ನ್ನು ಮಹಾಪರಿನಿರ್ವಾಣ ದಿವಸವೆಂದು ಆಚರಿಸಲಾಗುತ್ತದೆ.
![]() |
![]() |
![]() |
![]() |
![]() |