
ಮಾನ್ವಿ : ಅಂಗಡಿ ಮುಂದೆ ಮಲಗುವ ವಿಚಾರಕ್ಕೆ ಸಂಬಂಧಿಸಿದಂತೆ, ಇಬ್ಬರ ನಡುವೆ ಜಗಳ ಉಂಟಾಗಿ ರಫಿ ಎಂಬ ಯುವಕನಿಗೆ ಚಾಕು ಇರಿದು ಕೊಲೆಗೆ ಏಪ್ರಿಸಿದ ಘಟನೆ ಸಿಸಿ ಕ್ಯಾಮೆರಾದಲ್ಲಿ ಸರಿಯಾಗಿದ್ದು ಪಟ್ಟಣದ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಬಸ್ ನಿಲ್ದಾಣ ಮುಂದಿರುವ ಪುರಸಭೆ ಮಳಿಗೆಗಳಲ್ಲಿ ತರಕಾರಿ ಮಾಲು ಇದ್ದ ಕಾರಣ ಮಳಿಗೆ ಮಾಲಕ ಚಿಮ್ಲಾಪುರ ಭಾಷಾ ಅವರು ತಿಳಿಸಿದ್ದರಿಂದ ರಫಿ ಎಂಬ ಯುವಕ ರಾತ್ರಿ ಮಲಗಲು ಬಂದಿದ್ದ. ರಫಿ ಎಂಬಾತ ಮೊಬೈಲ್ ನೋಡಿಕೊಂಡು ಕುಳಿತುಕೊಂಡಾಗ ಭಾಷಾ ಎಂಬ ಯುವಕ ಬಂದು ಮೊಬೈಲ್ ಕೊಡು ಎಂದು ಕೇಳಿದ್ದಾನೆ. ರಫಿ ಎಂಬಾತ ನಾನು ಮೊಬೈಲ್ ಕೊಡುವುದಿಲ್ಲ ಎಂದು ಜವಾಬು ನೀಡಿದ್ದರಿಂದ ಭಾಷಾ ಅಸಮಾಧಾನ ಯುವಕನ ಕುತ್ತಿಗೆಗೆ ಚಾಕು ಹಾಕಿದ್ದಾನೆ.
ಮಾನ್ವಿಯಲ್ಲಿ ಹಗಲು ಮತ್ತು ರಾತ್ರಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಮಾನ್ವಿ ಪೊಲೀಸರು ರಾತ್ರಿ ವೇಳೆ ಬೀಟ್ ಕೆಲಸ ಚುರುಕಾಗಿ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಮಾನ್ವಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ರಫಿ ಎಂಬಾತ ಪ್ರಾಣಾಪಯದಿಂದ ಪಾರಾಗಿದ್ದಾನೆ, ಪ್ರಕರಣ ದಾಖಲಾಗಿಲ್ಲ. ಈ ಕುರಿತು ಮಾನ್ವಿ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ತನಿಖೆ ಆರಂಭಿಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]