This is the title of the web page
This is the title of the web page
State News

ಸಹಾಯಕ ಆಯುಕ್ತ ಕಚೇರಿ ಪೀಠೋಪಕರಣ ಜಪ್ತಿ : ಆಯುಕ್ತರ ಕಾರು..?


K2kannadanews.in

Confiscation furniture ರಾಯಚೂರು : ಏತ ನೀರಾವರಿ ಯೋಜನೆಗಾಗಿ (Eta irrigation scheme) ರೈತರಿಂದ ಭೂಮಿ ವಶಕ್ಕೆ ಪಡೆದು 16 ವರ್ಷ ಕಳೆದರೂ (16 years), ರೈತರಿಗೆ ಬಿಡಿ ಕಾಸು ಪರಿಹಾರ ನೀಡಿಲ್ಲ, ನ್ಯಾಯಾಲಯ (Court) ಮೊರೆ ಹೋದ ರೈತನ ಪರನಿಂತ ನ್ಯಾಯಾಲಯ ಪರಿಹಾರ ನೀಡುವಂತೆ ಆದೇಶಿಸಿದ್ರು, ಆದೇಶಕ್ಕೆ ಕಿಮ್ಮತ್ತು ಕೊಡದ ಅಧಿಕಾರಿಗಳು Officer), ಇದೀಗ ನ್ಯಾಯಾಲಯ ಪರಿಹಾರ ಬದಲಿಗೆ ಸಹಾಯಕ ಆಯುಕ್ತರ (Assistant Commissioner) ಕಚೇರಿ ಪೀಠೋಪಕರಣಗಳನ್ನು (Martial) ಜಪ್ತಿ ಮಾಡಲು ಆದೇಶ ನೀಡಿದೆ. ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.

ಹೌದು ಸಣ್ಣ ನೀರಾವರಿ ಇಲಾಖೆ (Minor Irrigation Department) ಮೂಲಕ ಏತ ನೀರಾವರಿ ನಿರ್ಮಾಣ ಮಾಡಲು ಯೋಜನೆಯನ್ನು ರೂಪಿಸಿದೆ. ಅಂತೆಯೇ ರಾಯಚೂರು ತಾಲೂಕಿನ ಜೆ.ಮಲ್ಲಾಪುರು, ಮಾನವಿ ತಾಲೂಕಿನ ದದ್ದಲ್, ದೇವದುರ್ಗ ಸುಂಕೇಶ್ವರ ಗ್ರಾಮದಲ್ಲಿ 2008, 2009,ಹಾಗೂ 2012 ರಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಏತ ನೀರಾವರಿಗೆ ರೈತರಿಂದ ಏಕರೆಗೆ ಸುಮಾರು 2 ಲಕ್ಷ 98 ಸಾವಿರದಂತೆ ಭೂಮಿಯನ್ನು ರಾಯಚೂರು ಸಹಾಯಕ ಆಯುಕ್ತರ ಮೂಲಕ ಸ್ವಾದಿನ ಪಡಿಸಿಕೊಂಡಿದ್ದರು. ಆದರೆ ಇದುವರೆಗೆ ಯಾವುದೇ ಪರಿಹಾರ ನೀಡದೆ ಇರುವುದರಿಂದ ರೈತರು ಅಸಮಧಾನ ವ್ಯಕ್ತಪಡಿಸಿದ್ದರು. ಹಲವು ಬಾರಿ ಕಚೇರಿಗೆ ಅಲೆದಾಡಿದರು ಕೂಡ ಯಾವುದೇ ಉತ್ತರವಾಗಲಿ ಪರಿಹಾರವಾಗಲಿ ಅಧಿಕಾರಿಗಳು ನೀಡುತ್ತಿರಲಿಲ್ಲ.

ಈ ಕುರಿತು ರೈತರ ಪರನಿಂತ ನ್ಯಾಯಾಲಯ ಸುಮಾರು ಬಾರಿ ಪರಿಹಾರ ನೀಡಲು ಅದೇಶ ನೀಡಿದರು ಸಹ ಇದಕ್ಕೆ ಸಹಾಯಕ ಆಯುಕ್ತರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಅದರಿಂದ ಪ್ರಿನ್ಸಿಪಾಲ್ ಕೋರ್ಟ್ ಮತ್ತು ಎರಡನೇ ಹೆಚ್ಚುವರಿ ನ್ಯಾಯಾಲಯವು ಸಹಾಯಕ ಆಯುಕ್ತ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಲು ಆದೇಶ ನೀಡಿದ ಹಿನ್ನಲೆಯಲ್ಲಿ ಇಂದು ವಕೀಲರು ಹಾಗೂ ರೈತರೊಂದಿಗೆ ಕಚೇರಿಯ ಪೀಠೋಪಕರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇಂದು ಕಚೇರಿಗೆ ವಕೀಲರ ಸಮೇತ ಆಗಮಿಸಿದ ರೈತರು, ಕಚೇರಿಯಲ್ಲಿನ ಪೀಠೋಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಸಹಾಯಕ ಆಯುಕ್ತರ ವಾಹನವನ್ನು ಕೂಡ ವಶಕ್ಕೆ ಪಡೆಯಬೇಕಿತ್ತು. ವಾಹನ ಇಲ್ಲದ್ದರಿಂದ ಕೇವಲ ಪೀಠೋಪಕರಣಗಳನ್ನು ಜಪ್ತಿ ಮಾಡಿಕೊಂಡು ಹೋಗಿದ್ದಾರೆ.ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳುತ್ತಾರಾ, ರೈತರಿಗೆ ಪರಿಹಾರ ನೀಡುತ್ತಾರಾ ಅಂತ ಕಾದು ನೋಡಬೇಕಿದೆ.


[ays_poll id=3]