ವಿಧಾನಸಭಾ ಚುನಾವಣೆ ಹೆಲಿಕಾಪ್ಟರ್ ಗಳಿಗೆ ಹೆಚ್ಚಿದ ಬೇಡಿಕೆ
![]() |
![]() |
![]() |
![]() |
![]() |
K2 ನ್ಯೂಸ್ ಡೆಸ್ಕ್ : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ, ಹೆಲಿಕಾಪ್ಟರ್‌ಗಳಿಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ರಾಜಕೀಯ ಪಕ್ಷಗಳ ನಾಯಕರು ಪ್ರಚಾರ ಕಾರ್ಯ ಕೈಗೊಳ್ಳಲು ತಿಂಗಳುಗಟ್ಟಲೆ ಬಾಡಿಗೆಗೆ ಹೆಲಿಕಾಪ್ಟರ್ ಬುಕ್ ಮಾಡುತ್ತಿದ್ದಾರೆ. ಆದರೆ ಇಲ್ಲಿ ಇವುಗಳ ಬೆಲೆ ಎಷ್ಟಿದೆ ಗೊತ್ತಾ?
ಬೆಂಗಳೂರಿನ 2 ಪ್ರಮುಖ ಕಂಪನಿಗಳಿಂದ ಹೆಲಿಕಾಪ್ಟರ್‌ಗಳನ್ನು ಬುಕಿಂಗ್ ಮಾಡಲಾಗುತ್ತಿದ್ದು, ಎಲ್ಲಾ ಪಕ್ಷಗಳ ನಾಯಕರು ಕಂಪನಿ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಒಬ್ಬೊಬ್ಬ ನಾಯಕರು ಬರೋಬ್ಬರಿ ಒಂದು ತಿಂಗಳಿಗೆ ಹೆಲಿಕಾಪ್ಟರ್‌ಗಳನ್ನು ಬುಕ್ ಮಾಡುತ್ತಿದ್ದಾರೆ.
ಹೆಲಿಕಾಪ್ಟರ್‌ಗಳ ಬಾಡಿಗೆ ದರ ?
* 2 ಆಸನಗಳ ಹೆಲಿಕಾಪ್ಟರ್- ಪ್ರತಿ ಗಂಟೆಗೆ 2.20 ಲಕ್ಷ.
* 4 ಆಸನಗಳ ಹೆಲಿಕಾಪ್ಟರ್- ಪ್ರತಿ ಗಂಟೆಗೆ 2.40 ಲಕ್ಷ.
ಮಿನಿ ವಿಮಾನಗಳಿಗೆ ನಿಗದಿ ಆಗಿರುವ ದರಗಳು
* 6 ಆಸನಗಳ ಮಿನಿ ವಿಮಾನ-ಪ್ರತಿ ಗಂಟೆಗೆ 2.60 ಲಕ್ಷ
* 8 ಆಸನಗಳ ಮಿನಿ ವಿಮಾನ-ಪ್ರತಿ ಗಂಟೆಗೆ 3.50 ಲಕ್ಷ
* 13 ಆಸನಗಳ ಮಿನಿ ವಿಮಾನ-ಪ್ರತಿ ಗಂಟೆಗೆ 4 ಲಕ್ಷ
* 15 ಆಸನಗಳ ಮಿನಿ ವಿಮಾನ- ಪ್ರತಿ ಗಂಟೆಗೆ 5 ಲಕ್ಷ
![]() |
![]() |
![]() |
![]() |
![]() |