This is the title of the web page
This is the title of the web page
National News

ಬೆಕ್ಕಿನ ಹಸಿ ಮಾಂಸ ತಿಂದ ಅಸ್ಸಾಂ ವ್ಯಕ್ತಿ..!


K2kannadanews.in

raw cat meat : ಕಳೆದ ಐದು ದಿನಗಳಿಂದ ತಿನ್ನಲು ಏನೂ ಸಿಗದೇ ಹಸಿವಿನಿಂದ (hunger) ಕಂಗೆಟ್ಟಿದ್ದ ಅಸ್ಸಾಂ(Assam) ಮೂಲದ ವ್ಯಕ್ತಿಯೊಬ್ಬ ಬೆಕ್ಕಿನ ಹಸಿ ಮಾಂಸವನ್ನು (raw cat meat) ಸೇವಿಸುತ್ತಿದ್ದ ಆಘಾತಕಾರಿ ಘಟನೆಯೊಂದು ಉತ್ತರ ಕೇರಳ ಜಿಲ್ಲೆಯ ಕುಟ್ಟಿಪ್ಪುರಂನಲ್ಲಿ ಬೆಳಕಿಗೆ ಬಂದಿದೆ.

ಬಸ್ ನಿಲ್ದಾಣದ (Bus station) ಮೆಟ್ಟಿಲುಗಳ ಮೇಲೆ ಕುಳಿತು ಸತ್ತ ಬೆಕ್ಕಿನ (dead cat) ಹಸಿ ಮಾಂಸವನ್ನು ತಿನ್ನುತ್ತಿರುವುದನ್ನು ಸ್ಥಳೀಯರು (Public) ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಕ್ಕ ಸ್ಥಳಕ್ಕೆ ಭೇಟಿ ನೀಡಿ, ಆ ವ್ಯಕ್ತಿಯನ್ನು ವಿಚಾರಿಸಿದಾಗ, ಕಳೆದ ಐದು ದಿನಗಳಿಂದ ಯಾವುದೇ ಆಹಾರವನ್ನು ಸೇವಿಸಿಲ್ಲ (last 5 days Didn’t eat food). ಹೀಗಾಗಿ ಹಸಿವು ತಾಳದೇ ಬೆಕ್ಕಿನ ಮಾಂಸ ತಿಂದಿರುವುದಾಗಿ ಹೇಳಿದ್ದಾನೆ ಎಂದು ಪೊಲೀಸ್ ಅಧಿಕಾರಿ (Police officer) ಮಾಹಿತಿ ನೀಡಿದ್ದಾರೆ.

ಪೊಲೀಸರು ಅಲ್ಲಿಯೇ ಆ ವ್ಯಕ್ತಿಗೆ ಊಟ ಕೊಡಿಸಿದ್ದಾರೆ ಮತ್ತು ಅದನ್ನು ಯಾವುದೇ ಹಿಂಜರಿಕೆಯಿಲ್ಲದೆ ಸ್ವೀಕರಿಸಿದ್ದಾನೆ. ಬಳಿಕ ಆ ವ್ಯಕ್ತಿ ಬಗ್ಗೆ ವಿಚಾರಿಸಿದಾಗ (enquiry), ಆತ ಅಸ್ಸಾಂನ ಧುಬ್ರಿ ಜಿಲ್ಲೆಯವನು (Dubri district) ಎಂದು ತಿಳಿದುಬಂದಿದೆ. ತಾನು ಕಾಲೇಜು ವಿದ್ಯಾರ್ಥಿಯಾಗಿದ್ದು( college student), ಕಳೆದ ಡಿಸೆಂಬರ್ ನಲ್ಲಿಯೇ ಇಲ್ಲಿಗೆ ಬಂದಿದ್ದೇನೆ. ಈ ಬಗ್ಗೆ ತನ್ನ ಕುಟುಂಬಕ್ಕೆ ಮಾಹಿತಿ ನೀಡಿಲ್ಲ. ಆ ಯುವಕನಿಂದ ಕುಟುಂಬಸ್ಥರ ಮೊಬೈಲ್ (Mobile) ನಂಬರ್ ಪಡೆದು ಮಾಹಿತಿ ನೀಡಲಾಗಿದ್ದು (Inform his family) ಅವರು ಬಂದ ನಂತರ ಯುವಕನನ್ನು ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದರು.


[ays_poll id=3]