This is the title of the web page
This is the title of the web page
State NewsVideo News

ಅಗ್ನಿ ಅವಗಡ ಸುಟ್ಟು ಕರಕಲಾದ ಡಾಬಾ : ಅಗ್ನಿಶಾಮಕ ವಾಹನಗಳೇ ಇರಲಿಲ್ಲವಂತೆ..?


ಅಗ್ನಿ ಅವಘಡ ಸುಟ್ಟು ಕರಕಲಾದ ದಾಬಾ : ಅಗ್ನಿಶಾಮಕ ವಾಹನಗಳೇ ಇರಲಿಲ್ಲವಂತೆ..?

K2kannadanews.in
Fire Incident : ಡಾಬಾದಲ್ಲಿ (Daba) ಆಕಸ್ಮಿಕವಾಗಿ ಬೆಂಕಿ (Fire) ತಗುಲಿ, ಬೆಂಕಿ ಕೆನ್ನಾಲಿಗೆ ನಾಲ್ಕು ಸಿಲೆಂಡರ್ (cylinder) ಸ್ಪೋಟಗೊಂಡು (Blast) ಸುಟ್ಟು ಕರಕಲಾಗಿದೆ. ಆದರೆ ಬೆಂಕಿ ನಂದಿಸಲು ಅಗ್ನಿ ಶಾಮಕ ದಳದ ವಾಹನಗಳೇ ಇರಲಿಲ್ಲ ಎಂದು ಹೇಳಲಾಗುತ್ತಿದೆ.

ಹೌದು ರಾಯಚೂರು (Raichur) ಜಿಲ್ಲೆಯ ಸಿಂಧನೂರು (Sindhanur) ನಗರದ ಹೊರವಲಯದ ಡಾಬಾ ಒಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಇಡೀ ಡಾಬಾ ಹೊತ್ತಿ ಉರಿದಿದೆ. ಡಾಬಾದಲ್ಲಿನ ನಾಲ್ಕು ಅಡುಗೆ ಅನಿಲ ಸಿಲಿಂಡರ್ ಸ್ಪೋಟಗೊಂಡಿದ್ದು ಡಾಬಾ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಗಂಗಾವತಿ (Gangavti Road)) ರಸ್ತೆಯಲ್ಲಿ ಇರುವ ಕೆಎ 36 ಹೆಸರಿನ ಡಾಬಾದಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ಅದೃಷ್ಟವಶಾತ್ (Fortunately) ಯಾವುದೇ ಪ್ರಾಣಾಪಾಯವಾಗಿಲ್ಲ. ಅಗ್ನಿಶಾಮಕ (fire extinguisher) ದಳ ವಾಹನಗಳು ಬೇರೆಡೆ ತೆರಳಿದ್ದು ಸಮಯಕ್ಕೆ ಬಾರದ ಹಿನ್ನೆಲೆ ಬೆಂಕಿಯ ಕೆನ್ನಾಲಿಗೆ ಎಲ್ಲೆಡೆ ಹಬ್ಬಿ ಸಂಪೂರ್ಣವಾಗಿ ಸುಟ್ಟಿದೆ. ಅಗ್ನಿ ದುರಂತದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು (matirials) ಹಾನಿಯಾಗಿವೆ. ಸಿಂಧನೂರು ನಗರ ಪೊಲೀಸ್ ಠಾಣಾ (city police station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


[ays_poll id=3]