This is the title of the web page
This is the title of the web page
Crime NewsState News

ಸೋನು ಶ್ರೀನಿವಾಸ ಗೌಡ ಬಂಧನ ಪ್ರಕರಣ ರಾಯಚೂರಿನಲ್ಲಿ ಮುಂದುವರೆದ ತನಿಖೆ


K2kannadanews.in

Sonugoda case ರಾಯಚೂರು : ಕಾನೂನುಬಾಹಿರವಾಗಿ ಮಗುವನ್ನ (girl) ದತ್ತು ಪಡೆದ ಪ್ರಕರಣಕ್ಕೆ (case) ಸಂಬಂದಿಸಿದಂತೆ, ಸೋನು ಶ್ರೀನಿವಾಸ ಗೌಡ (sonu goda) ಬಂಧನ ಪ್ರಕರಣ ರಾಯಚೂರಿನಲ್ಲಿ ತನಿಖೆ ಮುಂದುವರೆದಿದೆ.

ರಾಯಚೂರು (Raichur) ಜಿಲ್ಲೆಯ ಮಸ್ಕಿ (Maski) ತಾಲೂಕಿನ ಕಾಚಾಪುರದಲ್ಲಿ ಇಂದು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು (byadarahalli police) ಸ್ಥಳ ಮಹಜರ್ ನಡೆಸಲಿದ್ದಾರೆ. ಸೋನು ಗೌಡಳನ್ನ ರಾಯಚೂರಿಗೆ ಕರೆದುಕೊಂಡು ಬಂದಿರುವ ಬಾಡರಳ್ಳಿ ಪೊಲೀಸರು. ಕಾಚಾಪುರ ಗ್ರಾಮಕ್ಕೆ ತೆರಳಿ ಮಗುವಿನ ಮನೆಗೆ ಭೇಟಿ (Visit to girl home) ನೀಡಲಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ನೆಕ್ಸ್ಟ್ ಗೆ ದೊರೆತಿದೆ.

ಗ್ರಾಮದಲ್ಲಿ ಮಗುವಿನ ಪೋಷಕರು ಸಂಬಂಧಿಕರಿಂದ ಹೆಚ್ಚಿನ ಮಾಹಿತಿ ಕಲೆ (Information) ಹಾಕಲಿದ್ದಾರೆ ಅಧಿಕಾರಿಗಳು. ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ದಂಪತಿಯಿಂದ ಸೋನು ಗೌಡ ಮಗುವನ್ನು ಪಡೆದಿದ್ದಾರೆ ಎನ್ನಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ (Social media) ಮಗುವಿನ ಗುರುತು ಬಹಿರಂಗ ಪಡಿಸಿದ ಕಾರಣ ಜೆಜೆ ಆಕ್ಟ್ (JJ act) ಉಲ್ಲಂಘನೆ ಆರೋಪದಲ್ಲು ಪ್ರಕರಣ ದಾಖಲಿಸಲಾಗಿದೆ. ದತ್ತು ನಿಯಮಗಳನ್ನ ಉಲ್ಲಂಘನೆ ಮಾಡಿ ಮಗುವನ್ನ ಪಡೆದಿರುವ ಆರೋಪದಡಿ ಸೋನುಗೌಡ ಅವರನ್ನು ಬಂದಿಸಿ ತನಿಖೆ ಮಾಡಲಾಗುತ್ತಿದೆ.


[ays_poll id=3]