This is the title of the web page
This is the title of the web page
Local NewsState News

ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ವಿವಿಧ 26 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ


K2kannadanews.in

Job ನ್ಯೂಸ್ : ರಾಯಚೂರು ಜಿಲ್ಲಾ(District Court) ಮತ್ತು ಸತ್ರ ನ್ಯಾಯಾಧೀಶರ (Sessions Judge)ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ 26ಹುದ್ದೆಗಳ(jobs) ಭರ್ತಿಗೆ ಅಧಿಸೂಚನೆ(Notification) ಹೊರಡಿಸಲಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ(last date) ದಿನಾಂಕ ಡಿಸೆಂಬರ್​ 21 ಆಗಿದೆ.

ಬೆರಳ್ಳಚ್ಚುಗಾರ, ಜವಾನ ಸೇರಿದಂತೆ ಒಟ್ಟು 26 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ರಾಯಚೂರು ಜಿಲ್ಲಾ ನ್ಯಾಯಾಲಯದಿಂದ ಅರ್ಜಿ ಆಹ್ವಾನಿಸಲಾದ ಒಟ್ಟು 26 ಹುದ್ದೆಗಳ ಮಾಹಿತಿ ಇಂತಿದೆ.

*ಸ್ಟೆನೋಗ್ರಾಫರ್ ಗ್ರೇಡ್​ 3 – 1(Stenographer)
*ಟೈಪಿಸ್ಟ್​​ – 8(Typest)
*ಟೈಪಿಸ್ಟ್​- ಕಾಪಿಸ್ಟ್ – ​ 1(Typest-copyest)
*ಪ್ರೊಸೆಸ್​ ಸರ್ವರ್​​ – 5 (process server)
*ಜವಾನ – 10 (Javan)
*ಚಾಲಕ – 1 (driver)

ಜವಾನ, ಚಾಲಕರ ಹುದ್ದೆ ಹೊರಾತಾಗಿ ಉಳಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಪೂರ್ಣಗೊಳಿಸಿರಬೇಕು. ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಪರೀಕ್ಷೆಯಲ್ಲಿ ಟೈಪಿಂಗ್​ ಮತ್ತು ಶೀಘ್ರ ಲಿಪಿಗಾರ ಪರೀಕ್ಷೆಯಲ್ಲಿ ಸಿನಿಯರ್​​​ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಜವಾನ ಮತ್ತು ಚಾಲಕರ ಹುದ್ದೆಗೆ 10ನೇ ಪರೀಕ್ಷೆ ಉತ್ತೀರ್ಣರಾಗಿರಬೇಕು.

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 18 ರಿಂದ ಗರಿಷ್ಠ 35 ವರ್ಷ ವಯೋಮಿತಿ ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ. ಉಳಿದ ಅಭ್ಯರ್ಥಿಗಳಿಗೆ 200 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ. ಈ ಹುದ್ದೆಗೆ ಅಭ್ಯರ್ಥಿಗಳನ್ನು ಟೈಪಿಂಗ್​ ಪರೀಕ್ಷೆ, ಕಂಪ್ಯೂಟರ್​ ಸಾಕ್ಷರತೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಈ ಹುದ್ದೆಗೆ ನವೆಂಬರ್​ 22ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಡಿಸೆಂಬರ್​ 21 ಆಗಿದೆ. ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು  raichur.dcourts.gov.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.


[ays_poll id=3]