This is the title of the web page
This is the title of the web page
Local News

NEET ಪರೀಕ್ಷೆಯಲ್ಲಿ 127ನೇ ರಾಂಕ್ ಪಡೆದ ಅನುರಾಗ ರಂಜನ್


ರಾಯಚೂರು : 2023-24ರ ಶೈಕ್ಷಣಿಕ ವರ್ಷಕ್ಕೆ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ ರಾಯಚೂರಿನ ಹುಡುಗ ಅನುರಾಗ ರಂಜನ್ ರಾಜ್ಯದ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಮಂಗಳವಾರ ತಡರಾತ್ರಿ ಬಿಡುಗಡೆಯಾದ NEET 2023 ಫಲಿತಾಂಶದಲ್ಲಿ ರಾಯಚೂರು ನಗರದ, ಪ್ರಮಾಣ ಕಾಲೇಜಿನ ವಿದ್ಯಾರ್ಥಿ ಅನುರಾಗ ರಂಜನ್ ಅಖಿಲ ಭಾರತ ಮಟ್ಟದಲ್ಲಿ 127 ನೇ ರ‍್ಯಾಂಕ್ ಪಡೆದಿದ್ದು, ಒಟ್ಟಾರೆ 720 ಅಂಕಗಳಿಗೆ 70‌5 ಅಂಕಗಳಿಸಿದ್ದಾನೆ. ನಾನು ಎರಡು ವರ್ಷಗಳ ಕಾಲ ಸತತ ಪ್ರಯತ್ನ ಮಾಡಿದ್ದೇನೆ. ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ನಾನು ನನ್ನ ಪರಿಶ್ರಮ ಹಾಕಿದ್ದಕ್ಕೆ ಇಂದು ಉತ್ತಮ ಸ್ಥಾನದಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದೇನೆ. ಇದಕ್ಕೆ ಮುಖ್ಯವಾಗಿ ಕಾಲೇಜಿನ ಉಪನ್ಯಾಸಕರು ಮತ್ತು ನನ್ನ ಪಾಲಕರು ಸಾಕಷ್ಟು ಸಹಕರಿಸಿದ್ದಾರೆ ಎಂದು ಅನುರಾಗ ರಂಜನ್ ಸಂತಸ ಹಂಚಿಕೊಂಡರು.

ಇನ್ನು ನಿಟ್ ಪರೀಕ್ಷೆಯಲ್ಲಿ ಫಿಸಿಕ್ಸ್ ವಿಷಯದಲ್ಲಿ 99.98, ಕೆಮಿಸ್ಟ್ರಿ ವಿಷಯದಲ್ಲಿ 99.86 ಮತ್ತು ಬಯಾಲಜಿ ವಿಷಯದಲ್ಲಿ 99.95 ಅಂಕಗಳಲ್ಲಿ ಒಟ್ಟಾರೆಯಾಗಿ 99.99 ರಷ್ಟು ಅಂಕಗಳನ್ನು ಪಡೆದ ಬಗ್ಗೆ ಅನುರಾಗ ರಂಜನ್ ಅವರ ಉಪನ್ಯಾಸಕರಾದ ಬಸವರಾಜ ಆರ್ ಪಲ್ಲೆದ್ ಮಾತನಾಡುತ್ತಾ, ವಿದ್ಯಾರ್ಥಿಯ ಸಾಧನೆ ಆಗದವಾದದ್ದು ವಿದ್ಯಾರ್ಥಿಯ ಸಾಧನೆಯಿಂದ ಕಾಲೇಜಿನ ಕೀರ್ತಿ ಮತ್ತು ರಾಯಚೂರಿನ ಕೀರ್ತಿ ಹೆಚ್ಚಿದೆ ಎಂದು ಸಂತಸ ಹಂಚಿಕೊಂಡರು.


[ays_poll id=3]