This is the title of the web page
This is the title of the web page
Education News

SSLC ಪರೀಕ್ಷೆಯ ಕೀ ಉತ್ತರಗಳ ಪ್ರಕಟಣೆ : ಆಕ್ಷೇಪಣೆಗೆ ಮೂರು ದಿನ ಕಾಲಾವಕಾಶ


K2 ನ್ಯೂಸ್ ಡೆಸ್ಕ್ : ಮಾರ್ಚ್ 31 ರಿಂದ ಏಪ್ರಿಲ್ 15 ರವರೆಗೆ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಕೀ ಉತ್ತರಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವೆಬ್ಸೈಟ್ ನಲ್ಲಿ ಪ್ರಕಟಿಸಿದೆ.

ವಿದ್ಯಾರ್ಥಿಗಳು ಕೀ ಉತ್ತರಗಳನ್ನು ಪರೀಕ್ಷಿಸಿ ಆಕ್ಷೇಪಣೆಗಳಿದ್ದಲ್ಲಿ ಮೂರು ದಿನಗಳ ಒಳಗೆ ಆನ್ಲೈನ್ ಮೂಲಕ ಸಲ್ಲಿಸಬಹುದು. kseab.karnataka.gov.in ವೆಬ್ಸೈಟ್ ನಲ್ಲಿ ಲಾಗಿನ್ ಆಗಿ ವಿದ್ಯಾರ್ಥಿ ನೋಂದಣಿ ಸಂಖ್ಯೆ, ಒಟಿಪಿ ದಾಖಲಿಸಿ ಆಕ್ಷೇಪಣೆ ಸಲ್ಲಿಸಬಹುದು. ಏಪ್ರಿಲ್ 16ರಿಂದ 18ರಂದು ಸಂಜೆ 5:30ರ ವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶವಿದೆ.


[ays_poll id=3]