This is the title of the web page
This is the title of the web page
Local NewsState News

ಕೃಷ್ಣ ನದಿಯಲ್ಲಿ ಹಳೆ ಕಾಲದ ಹಳೆಯ ಮೂರ್ತಿಗಳು : ಇಲ್ಲಿದೆ ಮಾಹಿತಿ..!


K2kannadanews.in

Old idols ರಾಯಚೂರು : ಕೃಷ್ಣಾ ನದಿಗೆ (Krishna river) ಅಡ್ಡಲಾಗಿ ಕಟ್ಟಲಾಗುತ್ತಿರುವ ಮೇಲ್ ಸೇತುವೆ ಕಾಮಗಾರಿ (Bridge work) ನದಿಯ ಸ್ಥಳದಲ್ಲಿ ಶಿವಲಿಂಗ (shivalingu) ಮತ್ತು ದಶಾವತಾರ ವಿಷ್ಣುವಿನ (dashavtar Vishnu) ಹಳೇ ಮೂರ್ತಿಗಳು (Idols) ಪತ್ತೆಯಾಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಕಾಮಗಾರಿ ಸ್ಥಳದಲ್ಲಿ ಶಿಲಾ ಮೂರ್ತಿ, ಶಿವಲಿಂಗ ಪತ್ತೆಯಾಗಿದ್ದು, ಶಂಖ ಚಕ್ರ ಹಿಡಿದಿರುವ ವಿಷ್ಟುವಿನ ಮೂರ್ತಿಯ ಸುತ್ತಲೂ ದಶಾವತಾರಗಳ ಕೆತ್ತನೆ ಮಾಡಲಾಗಿದೆ. ಇದು ಹಳೆಯ ಕಾಲದ್ದು ಎಂಬ ಚರ್ಚೆಗಳ ಸಾರ್ವಜನಿಕ (public) ವಲಯದಲ್ಲಿ ಆಗುತ್ತಿದ್ದು. ಸದ್ಯಕ್ಕೆ ಮೂರ್ತಿಗಳನ್ನು ನದಿ ಪಾತ್ರದಲ್ಲಿರಿಸಿ ಸ್ಥಳೀಯರು, ಸಿಬ್ಬಂದಿಗಳು(Staff) ಪೂಜೆ ಮಾಡಿದ್ದಾರೆ.

ಇನ್ನೊಂದೆಡೆ ಕೆಲವರು ಮೂರ್ತಿ ಮುಕ್ಕಾಗಿರುವ ಕಾರಣಕ್ಕೆ ನದಿಗೆ ಹಾಕಿರಬಹುದು ಎಂದು ಹೇಳುತ್ತಿದ್ದಾರೆ. ಈ ಮೂರ್ತಿಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ(Information) ಲಭ್ಯವಾಗಿಲ್ಲ. ಈ ಬಗ್ಗೆ ಇತಿಹಾಸಕಾರರು ಅಥವಾ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳಿಂದಲೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ..


[ays_poll id=3]