This is the title of the web page
This is the title of the web page
Crime NewsLocal NewsVideo News

ಏಕಾ ಏಕಿ ಹೊತ್ತಿ ಉರಿದ ಎಲೆಕ್ಟ್ರಿಕ್ ಬೈಕ್


ರಾಯಚೂರು : ಮನೆಯಲ್ಲಿ ನಿಲ್ಲಿಸಿದ್ದ ಎಲೆಕ್ಟ್ರಿಕ್ ಬೈಕ್ ಒಂದಕ್ಕೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಕೆಲ ಕಾಲ ಆತಂಕ ಹುಟ್ಟಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ.

ನಗರದ ಜವಾಹರನಗರ ಬಡಾವಣೆಯಲ್ಲಿ ಎಲೆಕ್ಟ್ರಿಕ್ ಬೈಕ್ ಗೆ ಬೆಂಕಿ ಹೊತ್ತಿಕೊಂಡಿದೆ. ನವೀನಕುಮಾರ ಎಂಬುವರಿಗೆ ಸೇರಿದ ಬೈಕ್ ಎನ್ನಲಾಗಿದೆ. ಬೆಂಕಿ ಹತ್ತುತ್ತಿದ್ದಂತೆ ಎಚ್ಚೆತ್ತ ಮಾಲಿಕ ಬೆಂಕಿ ನಂದಿಸಿ ಅನಾಹುತ ತಪ್ಪಿಸಿದ್ದಾರೆ. ನಿಲ್ಲಿಸಿದ್ದ ಬೈಕ್ ಗೆ ಏಕಾ ಏಕಿ ಬೆಂಕಿ ಹತ್ತಿದ್ದು ತಾಂತ್ರಿಕ ದೋಷದದಿಂದ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ರಾಯಚೂರು ವೆಸ್ಟ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


[ays_poll id=3]