
K2 ಪೊಲಿಟಿಕಲ್ ನ್ಯೂಸ್ : ರಾಜ್ಯ ಬಿಜೆಪಿಯಲ್ಲಿ ಸಚಿವ ‘ಸೋಮಣ್ಣ’ ಸಂಚಲನ! ಸಾಮಾನ್ಯವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಅವರಿದ್ದ ಕಡೆ ರಾಜಕೀಯ ನಾಯಕರು ಭೇಟಿ ಮಾಡುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ ಸೋಮಣ್ಣ ಮನೆಗೆ ಮಾತ್ರ ಅಮಿತ್ ಶಾ ಭೇಟಿ ನೀಡಿರುವುದು ರಾಜ್ಯ BJPಯಲ್ಲಿ ಸಂಚಲನ ಮೂಡಿಸಿದೆ.
BJP ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ B.L. ಸಂತೋಷ್ ಮತ್ತು ಅಮಿತ್ ಶಾ ಮಾತುಕತೆ ಬಳಿಕ ಅವರು ಸೋಮಣ್ಣ ಮನೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ತಮ್ಮದೇ ಆದ ವರ್ಚಸ್ಸು ಉಳಿಸಿಕೊಂಡಿರುವ ಸೋಮಣ್ಣ ಕಾರ್ಯವೈಖರಿ BJP ವರಿಷ್ಠ ಮಂಡಳಿಯ ಗಮನಕ್ಕೂ ಬಂದಿದೆ.
ಸಚಿವ ಸೋಮಣ್ಣಗೆ ಭಾರೀ ದೊಡ್ಡ ಜವಾಬ್ದಾರಿ? :
ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಚಿವ ಸೋಮಣ್ಣ ಮನೆಗೆ ದಿಢೀರ್ ಭೇಟಿ ನೀಡಿರುವುದು ಹಲವು ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ. ಯಡಿಯೂರಪ್ಪ ಅವರನ್ನು CM ಸ್ಥಾನದಿಂದ ಕೆಳಗಿಳಿಸಿದ ಬಳಿಕ ವೀರಶೈವ ಸಮುದಾಯದ ಸ್ವಾಮೀಜಿಗಳು BJPಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ರಾಜ್ಯದ ಎಲ್ಲಾ ವೀರಶೈವ ಶ್ರೀಗಳ ಜೊತೆ ಅತ್ಯುತ್ತಮ ಸಂಬಂಧ ಹೊಂದಿರುವ ಸೋಮಣ್ಣ ಅವರಿಗೆ ಸ್ವಾಮೀಜಿಗಳ ಮನವೊಲಿಕೆ ಜವಾಬ್ದಾರಿಯನ್ನು ಅಮಿತ್ ಶಾ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
![]() |
![]() |
![]() |
![]() |
![]() |
[ays_poll id=3]