
ರಾಯಚೂರು : ನಗರಾಭಿವೃದ್ಧಿ ಪ್ರಾಧಿಕಾರದಿಂದ ಕಳೆದ 2007-08ರಿಂದ 2021-22 ರವರೆಗೆ ಕೊಳಚೆ ನಿರ್ಮೂಲನಾ ಮಂಡಳಿಯ ಸೆಸ್ ಒಟ್ಟು 32,18,627 ಸಂಗ್ರಹವಾಗಿದ್ದು ಅದರಲ್ಲಿ ರೂ.7,29,600 ರೂ. ಮಾತ್ರ ಕೊಳಚೆ ನಿರ್ಮೂಲನಾ ಮಂಡಳಿಗೆ ಪಾವತಿಸಿರುವುದರಿಂದ ಉಳಿದ ಹಣ ಲೂಟಿಯಾಗಿರುವ ಸಾಧ್ಯತೆಗಳಿವೆ ಎಂದು ಸಾಮಾಜಿಕ ಕಾರ್ಯಕರ್ತ ಟಿ. ಮಾರೆಪ್ಪ ಗಂಭೀರ ಆರೋಪ ಮಾಡಿದರು.
24,78,772 ರೂ. ಗಳು ಕೊಳಚೆ ನಿರ್ಮೂಲನಾ ಮಂಡಳಿಗೆ ಪಾವತಿಯಾಗಬೇಕಿತ್ತು. ಪಾವತಿಯಾಗಿಲ್ಲ ಅಂದರೆ ಇಷ್ಟು ಪ್ರಮಾಣದ ಹಣ ಯಾರ ಜೇಬಿಗೆ ಹೋಯಿತು ಎಂದು ಪ್ರಶ್ನಿಸಿದರಲ್ಲದೆ ಇದಕ್ಕೆ ಪ್ರಾಧಿಕಾರದ ಆಯುಕ್ತರು ಉತ್ತರಿಸಬೇಕೆಂದು ಆಗ್ರಹಿಸಿದರು. ಇನ್ನು ಮುಂದಿನ ದಿನಗಳಲ್ಲಿ ರೆರಾ ತೆರಿಗೆ, ಕಾರ್ಮಿಕ ಸೆಸ್, ಗುತ್ತಿದಾರರ ಕಲ್ಯಾಣ ನಿಧಿ, ಆದಾಯ ತೆರಿಗೆ, ಟೆಂಡರ್ ಕರೆಯದೆ ಕಾಮಗಾರಿ ಕೈಗೊಂಡ ಇನ್ನಿತರ ಕಾಮಗಾರಿಗಳ ಬಗ್ಗೆ ಮತ್ತು ಇನ್ನಿತರ ಭ್ರಷ್ಟಾಚಾರ ಕರ್ಮಕಾಂಡವನ್ನು ಜನತೆಗೆ ಬಹಿರಂಗಪಡಿಸುವುದರ ಮೂಲಕ ಪ್ರಾಧಿಕಾರವನ್ನು ಸೂಪರ್ ಸೀಡ್ ಮಾಡಿಸುವ ಹಂತದವರೆಗೂ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಸಿದರು.
![]() |
![]() |
![]() |
![]() |
![]() |
[ays_poll id=3]