This is the title of the web page
This is the title of the web page
Local News

ಲೈಂಗಿಕ ಕಿರುಕುಳ ಆರೋಪ, ಪ್ರಭಾರ ಪ್ರಾಚಾರ್ಯ ಅಮಾನತು


ದೇವದುರ್ಗ : ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರನ್ನು ಲೈಂಗಿಕ ಕಿರುಕುಳ ಆರೋಪದ ಮೇಲೆ ವಿಚಾರಣೆ ಕಾಯ್ದೆರಿಸಿ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಉಪ ನಿರ್ದೇಶಕ ಸೋಮಶೇಖರಪ್ಪ ಹೊಕ್ರಾಣಿ ತಿಳಿಸಿದ್ದಾರೆ.

ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದ ಪದವಿ ಪೂರ್ವ ಪ್ರಭಾರ ಪ್ರಾಚಾರ್ಯರಾದ ಸಿದ್ದಪ್ಪ ವಿರುದ್ಧ ಲೈಂಗಿಕ ಕಿರುಕುಳ, ದೌರ್ಜನ್ಯ ಮತ್ತು ಸಿಬ್ಬಂದಿಗೆ ಕಿರುಕುಳ ಹಾಗೂ ಎರಡನೇ ಮದುವೆಯಾಗಿರುವ ಬಗ್ಗೆ ಆರೋಪ ಕೇಳಿಬಂದ್ದವು, ಸಾಮಾಜಿಕ ಜಾಲತಾಣಗಳಲ್ಲಿ ಎರಡನೇ ಮದುವೆಯಾದ ಫೋಟೊ, ಅಶ್ಲೀಲ ಚಿತ್ರ, ವಿಡಿಯೊ ಹಾಗೂ ಸಂಭಾಷಣೆ ಹರಿದಾಡಿದ್ದನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.

ಸೋಮಶೇಖರ ಹೊಕ್ರಾಣಿ.. ಡಿಡಿಪಿಯು
ಸೋಮಶೇಖರ ಹೊಕ್ರಾಣಿ.. ಡಿಡಿಪಿಯು

ಹಲವು ದೂರುಗಳ ಹಿನ್ನೆಲೆಯಲ್ಲಿ ಇಲಾಖೆ ರಚಿಸಿದ ವಿಶೇಷ ತನಿಖಾ ತಂಡ ಗ್ರಾಮಕ್ಕೆ ಭೇಟಿ ನೀಡಿ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರಿಂದಲೂ ಮಾಹಿತಿ ಕಲೆ ಹಾಕಿದೆ. ಲೈಂಗಿಕ ಕಿರುಕುಳದ ಬಗ್ಗೆ ಗ್ರಾಮದ ಮುಖಂಡರು, ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು ಪಾಲಕರು ಹೇಳಿಕೆಗಳನ್ನು ಕೊಟ್ಟಿದ್ದಾರೆ. ಸಮಗ್ರವಾದ ವರದಿ ಸಿದ್ದಪಡಿಸಿ ಇಲಖೆಯ ನಿರ್ದೇಶಕರಿಗೆ ಸಲ್ಲಿಸಲಾಗಿತ್ತು, ವರದಿಯಲ್ಲಿನ ಅಂಶಗಳು ಮೇಲ್ನೋಟಕ್ಕೆ ಸಾಬೀತು ಹಿನ್ನೆಲೆ ಇಲಾಖೆಯ ತನಿಖೆಯನ್ನು ಕಾಯ್ದಿರಿಸಿ ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಉಪ ನಿರ್ದೇಶಕ ಸೋಮಶೇಖರಪ್ಪ ಹೊಕ್ರಾಣಿ ತಿಳಿಸಿದ್ದಾರೆ.


[ays_poll id=3]