This is the title of the web page
This is the title of the web page
Local NewsVideo News

KOF ಪರೀಕ್ಷೆಯಲ್ಲಿ ಅಕ್ರಮ ಆರೋಪ : ವೇದಾಂತ್ ಕಾಲೇಜಿನಲ್ಲಿ ನಡೆದ ಪರೀಕ್ಷೆ


ರಾಯಚೂರು : ಇಂದು ನಡೆದ ಕೆಓಎಫ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿ ನಗರದ ಪರೀಕ್ಷಾ ಕೇಂದ್ರದ ಮುಂದೆ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.

ರಾಯಚೂರು ನಗರದ ವೇದಾಂತ್ ಕಾಲೇಜಿನಲ್ಲಿ ಇಂದು (ಕೆ ಓ ಎಫ್) ಕರ್ನಾಟಕ ಆಯಿಲ್ ಫೆಡರೇಷನ್ ಅರ್ಹತಾ ಪರೀಕ್ಷೆಯನ್ನು ನಡೆಸಲಾಗುತ್ತಿತ್ತು. ರಾಯಚೂರು ವಿಶ್ವವಿದ್ಯಾಲಯಕ್ಕೆ ಈ ಪರೀಕ್ಷೆಯ ಹೊಣೆಗಾರಿಕೆಯನ್ನು ನೀಡಲಾಗಿತ್ತು. ಈ ವೇಳೆ ಪರೀಕ್ಷೆಯಲ್ಲಿ ಹಲವು ಅಭ್ಯರ್ಥಿಗಳು ಹಾಜರಾಗಿದ್ದರು. ಆದರೆ ಕೆಲ ವಿದ್ಯಾರ್ಥಿಗಳು ಕೊನೆಯ 15 ನಿಮಿಷಗಳ ಕಾಲ ಇದ್ದಾಗ ಕೊಠಡಿಗೆ ಬಂದಿದ್ದಾರೆ. ಅವರನ್ನು ಬೇರೆ ಕೋಣೆಯಲ್ಲಿ ಕೂರಿಸಿ ಪರೀಕ್ಷೆಯನ್ನು ಬರಿಸಲಾಗಿದೆ ಎಂದು ಉಳಿದ ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪರೀಕ್ಷೆ ನಿಯಮ ಪ್ರಕಾರ ಪರೀಕ್ಷೆ ಆರಂಭಕ್ಕೂ 15 ನಿಮಿಷ ಮುಂಚಿತವಾಗಿ ಕೋಣೆಗೆ ಬರಬೇಕು. ಆದರೆ ಐದು ಜನ ಅಭ್ಯರ್ಥಿಗಳು ಕೊನೆಯ 15 ನಿಮಿಷಗಳಿದ್ದಾಗ ಕೊಠಡಿಗೆ ಬಂದಿದ್ದಾರೆ. ಇದು ಅಕ್ರಮಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಘಟನೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಅಲ್ಲಿಗೆ ಆಗಮಿಸಿದಂತಹ ಪರೀಕ್ಷೆ ನಡೆಸುವ ಅಧಿಕಾರಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಐದು ಜನ ಅಭ್ಯರ್ಥಿಗಳು ಕೂಡ ಅಲ್ಲಿಂದ ಕಾಣೆಯಾಗಿದ್ದಾರೆ. ಇದರಿಂದ ಅಸಮಾಧಾನ ಗೊಂಡ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಮುಂದೆ ಗುಂಪು ಕಟ್ಟಿ ಪರೀಕ್ಷೆ ನಡೆಸುತ್ತಿರುವಂತಹ ಒಂದು ರಾಯಚೂರು ವಿದ್ಯಾಲಯದ ವಿರುದ್ಧ ಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇದೇ ವಿಚಾರವಾಗಿ ಕರ್ನಾಟಕ ಆಯಿಲ್ ಫೆಡರೇಷನ್ ಅಧ್ಯಕ್ಷರಾಗಿರುವ ಮಹಾಂತೇಶ್ ಪಾಟೀಲ್ ಅತನೂರು ಅವರ ಗಮನಕ್ಕೆ ತಂದರೆ, ಪರೀಕ್ಷೆ ನಡೆಸುವ ಬಗೆಗೂ ನಮಗೂ ಯಾವುದೇ ರೀತಿಯಾದ ಸಂಬಂಧ ಇರುವುದಿಲ್ಲ. ನಾವು ಒಂದು ಪರೀಕ್ಷಾ ಹೊಣೆಗಾರಿಕೆಯನ್ನು ವಿಶ್ವವಿದ್ಯಾಲಯಕ್ಕೆ ಏಜೆನ್ಸಿ ರೂಪದಲ್ಲಿ ನೀಡಿರುತ್ತೇವೆ ಎಂದು ಹೇಳುತ್ತಾರೆ.


[ays_poll id=3]