This is the title of the web page
This is the title of the web page
State News

ತಿಂಗಳಿಗೆ ಸರಕಾರಕ್ಕೆ 2,855 ಕೋಟಿ ಆದಾಯ ಕೊಡ್ತಿರೋ ಮದ್ಯಪ್ರಿಯರು..!


K2kannadanews.in

ನ್ಯೂಸ್ ಡೆಸ್ಕ್ : ರಾಜ್ಯದ ಆದಾಯ ಮೂಲದಲ್ಲಿ ಬಹುಪಾಲು ಆದಾಯ ತಂದಿದ್ದು ಮದ್ಯಪ್ರಿಯರಂತೆ. ಕರ್ನಾಟಕದಲ್ಲಿ (karnataka) ಮದ್ಯ ಸೇವನೆ(Alcohol consumption) ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ(treasury) ಭರ್ಜರಿ ಆದಾಯ ಹರಿದು ಬಂದಿದ್ದು, ದಿನಕ್ಕೆ10 ಕೋಟಿ ಆದಾಯ ಹೆಚ್ಚಾಗಿದೆ.

ಹೌದು, ಬಿಯರ್(beer) ಜೊತೆಗೆ ಇತರೆ ಮಾದರಿಯ ಮದ್ಯ ಮಾರಾಟದ(alcohol sales) ಪ್ರಮಾಣ 0.43 ಶೇ. ಹೆಚ್ಚಳವಾಗಿದ್ದು(hike), ಗ್ಯಾರಂಟಿ ಯೋಜನೆಗಳನ್ನು ನೀಡಿ ಬೇರೆ ಯೋಜನೆಗಳಿಗೆ ಹಣ ನೀಡಲು ಕಷ್ಟಪಡುತ್ತಿದ್ದ(strangling) ಸರ್ಕಾರಕ್ಕೆ ಮದ್ಯ ಪ್ರಿಯರು ಬೂಸ್ಟ್(boost) ನೀಡಿದ್ದಾರೆ. ಮದ್ಯ ದರ ಏರಿಕೆಯಾದರೂ(prize hike) ತಲೆ ಕೆಡಿಸಿಕೊಳ್ಳದ ಮದ್ಯ ಪ್ರಿಯರು ಕುಡಿಯುವದನ್ನು ಕಡಿಮೆ ಮಾಡಲಿಲ್ಲ. ಕಳೆದ ವರ್ಷ ದಿನಕ್ಕೆ(per day) 80 ಕೋಟಿ(core) ರೂ. ಸರಾಸರಿ ಆದಾಯ ಬರುತ್ತಿತ್ತು. ಈಗ ಒಂದು ದಿನಕ್ಕೆ 90 ಕೋಟಿ ರೂ,ಗೆ ಏರಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅದರಲ್ಲಿಯೂ ಚಳಿಗಾಲ(winter) ಶುರುವಾಗ್ತಿದ್ದಂತೆ ರಾಜ್ಯದಲ್ಲಿ ಬಿಯರ್ ಗೆ ಭಾರೀ ಬೇಡಿಕೆ(Huge demand) ಬಂದಿದ್ದು, ನವೆಂಬರ ನಲ್ಲಿ ಬರೋಬ್ಬರಿ 6 ಲಕ್ಷ(laks) ಬಿಯರ್ ಬಾಕ್ಸ್ ಗಳು ಸೇಲ್ ಆಗಿದೆ ಎಂದು ಮೂಲಗಳು ತಿಳಿಸಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ 29.95 ಲಕ್ಷ ಬಾಕ್ಸ್ ಸೇಲ್ ಆಗಿತ್ತು. ಈ ವರ್ಷ ನವೆಂಬರ್ ನಲ್ಲಿ 35.05 ಲಕ್ಷ ಬಾಕ್ಸ್ ಮಾರಾಟವಾಗಿದೆ. 2023 ನವೆಂಬರ್ ನಲ್ಲಿ 2,855 ಕೋಟಿ ರೂ. ಆದಾಯ ಬಂದಿದೆ.


[ays_poll id=3]