
K2 ಕ್ರೈಂ ನ್ಯೂಸ್ : ಚಾರ್ಮಾಡಿ ಘಾಟ್ ನಲ್ಲಿ ಭಾರೀ ಮಂಜು ಕವಿದು ದಾರಿ ಕಾಣದೆ ಘಾಟ್ ನಲ್ಲಿ ಪ್ರಪಾತದ ಬಳಿ ಎರಡು ಅಪಘಾತಗಳು ಜರುಗಿ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಜರುಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಬಿದಿರುತಳ ಗ್ರಾಮದ ಬಳಿ ತಡೆಗೋಡೆಗೆ ಡಿಕ್ಕಿಯೊಡೆದ ಬೊಲೆರೋ ಕಾರು, ಅಣ್ಣಪ್ಪ ಸ್ವಾಮಿ ದೇಗುಲದ ಬಳಿ ಬಸ್ಸು-ಕಾರು ಡಿಕ್ಕಿಯಾದ ಘಟನೆ ಜರುಗಿದ್ದು, ಬಸ್ಸು-ಕಾರು ಡಿಕ್ಕಿಯಾದ ರಭಸಕ್ಕೆ ಕಸಿದು ಬಿದ್ದ ತಡೆಗೋಡೆ ಬಿದ್ದಿದ್ದು, ಪ್ರಪಾತದ ಬಳಿಯೇ ನಡೆದಿರುವ ಅಪಘಾತ, ಭಾರೀ ಅನಾಹುತವೊಂದು ಕೂದಲನೆ ಅಂತರದಲ್ಲಿ ತಪ್ಪಿದೆ.
22 ಕಿ.ಮೀ. ವ್ಯಾಪ್ತಿಯ ಚಾರ್ಮಾಡಿಯಲ್ಲಿ ಮಳೆ ಜೊತೆ ಕವಿದಿರೋ ಮಂಜಿನಿಂದ, ವಾಹನಗಳನ್ನ ಡ್ರೈವ್ ಮಾಡಲು ಚಾಲಕರ ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. 2 ಅಪಘಾತದಲ್ಲೂ ಕಾರು-ಬಸ್ಸಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ. ಕೊಂಚ ಹೆಚ್ಚು ಕಡಿಮೆಯಾಗಿದ್ದರೂ ಕೂಡ ಪ್ರಪಾತಕ್ಕೆ ನೀಡಬೇಕಾಗಿದ್ದ ವಾಹನಗಳು. ಅಪಘಾತವಾದ ಸ್ಥಳದಲ್ಲಿ ಕುಸಿದು ಬಿದ್ದ ತಡಗೋಡೆ ಕೂಡಲೇ ನಿರ್ಮಿಸಲು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
![]() |
![]() |
![]() |
![]() |
![]() |
[ays_poll id=3]