This is the title of the web page
This is the title of the web page
Crime NewsState News

ಎಸಿ ಕಛೇರಿ ಡಿ ಗ್ರುಪ್ ನೌಕರ ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನ..?


K2kannadanews.in

commit suicide ರಾಯಚೂರು : ಎಸಿ ಕಛೇರಿ (AC Office) ಡಿ ದರ್ಜೆ ಸಿಬ್ಬಂದಿಯೊಬ್ಬರು (D group employee) ಆ್ಯಸಿಡ್ (Acid) ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಯಚೂರು ನಗರದಲ್ಲಿ ನಡೆದಿದೆ.

ರಾಯಚೂರು (Raichur) ನಗರದ ಜಿಲ್ಲಾ ಕ್ರೀಡಾಂಗಣದ (Studiyam) ಬಳಿಯಿರುವ ಸಾರ್ವಜನಿಕ ಈಜುಕೊಳದ (Swimming fool) ಬಳಿ ತೆರಳಿ ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಾಸಿಂ ಚೌದರಿ (Waseem chodari 42) ಆತ್ಮಹತ್ಯೆಗೆ ಯತ್ನಿಸಿದ್ದ ಸಿಬ್ಬಂದಿ. ವಾಸಿಂ ಎಸಿ ಕಚೇರಿಯ ಲ್ಯಾಂಡ್ ರೆಕಾರ್ಡ್ (Land record) ಕಿಪರ್ ಹುದ್ದೆಯಲ್ಲಿ ಡಿ ದರ್ಜೆ ಸಿಬ್ಬಂದಿಯಾಗಿದ್ದರು. ಕೂಲೆಂಟ್ ವಾಟರ್ (Violent water) ಬಾಟಲ್ ನಲ್ಲಿ ಆ್ಯಸಿಡ್ ಬೇರಸಿ ಸೇವಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ಘಟನೆ ತಿಳಿಯುತ್ತಿದ್ದಂತೆ ವಾಸಿಂನನ್ನು ನಗರದ ಸಂಕಲ್ಪ ಆಸ್ಪತ್ರೆಗೆ (sankalpa hospital) ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ (Hyderabad) ನ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಆ್ಯಸಿಡ್ ಸೇವಿಸಲು ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಾಸಿಂ ಆರೋಗ್ಯ ವಿಷಮ ಸ್ಥಿತಿಯಲ್ಲಿದೆ ಎನ್ನಲಾಗುತ್ತಿದೆ. ರಾಯಚೂರು ಪಶ್ಚಿಮ ಪೊಲೀಸ್ ಠಾಣೆ (Raichur west police station) ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


[ays_poll id=3]