
ರಾಯಚೂರು : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಯಚೂರು ನಗರ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದಿಂದ ಡಿ.ವೀರೇಶ ಕುಮಾರ ಅವರು ಸ್ಪರ್ಧಿಸಲಿದ್ದು,ನಗರ ಜನರು ಪ್ರಚಂಡ ಬಹುಮತದಿಂದ ಆರಿಸಿ ತರಬೇಕು ಎಂದು ಆಮ್ ಆದ್ಮಿ ಪಕ್ಷ ನಗರ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ವಿಷ್ಣುಪ್ರಸಾದ ಯಾದವ ಮನವಿ ಮಾಡಿದರು.
ಡಿ.ವೀರೇಶ ಕುಮಾರ ಯಾದವ ವಕೀಲರು, ಹಗಲು ರಾತ್ರಿ ಎನ್ನದೇ ಸುಮಾರು ಒಂದು ವರ್ಷಗಳ ಕಾಲ ರಾಯಚೂರು ನಗರದಲ್ಲಿ ಆಮ್ ಆದ್ಮಿ ಪಕ್ಷವನ್ನು ಕಟ್ಟಿ ನಗರದಾದ್ಯಂತ ಸಂಘಟನೆ ಮಾಡಿ ಮಾಡಿ ಪಕ್ಷದ ಸಿದ್ಧಾಂತಗಳನ್ನು ತಿಳಿಸಿ ನೂರಾರು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದಾರೆ. ಈ ಪಕ್ಷದಲ್ಲಿ ಯಾವುದೇ ಜಾತಿ ಧರ್ಮ ಮತ ಭೇದ ಭಾವವಿಲ್ಲದೆ ಜನರಲ್ಲಿ ಜಾಗೃತಿ ಮೂಡಿಸಿ ನಾವು ಎಲ್ಲರೂ ಒಂದೇ ಭಾವನದೊಂದಿಗೆ ಕೆಲಸವನ್ನು ಮಾಡಿದ್ದಾರೆ ಎಂದರು.
ಡಿ.ವೀರೇಶ ಅವರು ನಗರದ 35 ವಾರ್ಡ್ ಗಳಲ್ಲಿ 20 ಸಾವಿರಕ್ಕೂ ಹೆಚ್ಚು ಸದಸ್ಯತ್ವ ಅಭಿಯಾನ ಮಾಡಿ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ ಅತಿ ಹೆಚ್ಚು ಸದಸ್ಯರನ್ನು ಸೇರಿಸುವ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ ಎಂದರು.
![]() |
![]() |
![]() |
![]() |
![]() |
[ays_poll id=3]