
ರಾಯಚೂರು : ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವಂತಹ ಒಂದು ಪಿಂಚಣಿ ವಂಚಿತ ನೌಕರರ ಸಂಘದ ಪ್ರತಿಭಟನೆ 139 ದಿನ ಪೂರೈಸಿದರು, ಸರ್ಕಾರ ನಿರ್ಲಕ್ಷ್ಯ ತೋರುತ್ತಿರುವ ಹಿನ್ನೆಲೆಯಲ್ಲಿ ಮನನೊಂದ ಶಿಕ್ಷಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಹೌದು ಸಿಂಧನೂರು ನಗರದ ರೆಡ್ಡಿ ಪ್ರಾಥಮಿಕ ಅನುದಾನಿತ ಶಾಲೆಯಲ್ಲಿ ಶಿಕ್ಷಕರಾಗಿ, ಕೆಲಸ ಮಾಡುತ್ತಿದ್ದ ಶಂಕ್ರೆಪ್ಪ ಬೋರೆಡ್ಡಿ ಎಂಬುವ ಶಿಕ್ಷಕರು, ಬೆಂಗಳೂರಿನಲ್ಲಿ ನಡೆಯುತ್ತಿರುವಂತಹ ಅಹೋರಾತ್ರಿ ಅನಿರ್ದಿಷ್ಟ ಅವಧಿ ಧರಣಿಯಲ್ಲಿ ಪಾಲ್ಗೊಂಡಾಗ, ಯಾವುದೇ ನ್ಯಾಯ ಸಿಗುವುದಿಲ್ಲ ಎಂಬ ಖಿನ್ನತೆಗೆ ಒಳಗಾಗಿ, ಬೆಂಗಳೂರು ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಮನೆಯವರಿಗೆ ಶವ ಹಸ್ತಾಂತರಿಸಲಾಗಿದೆ ಈ ವೇಳೆ ಕುಟುಂಬಸ್ಥರದ ಮುಗಿಲು ಮುಟ್ಟಿತ್ತು.
![]() |
![]() |
![]() |
![]() |
![]() |
[ays_poll id=3]