This is the title of the web page
This is the title of the web page
State NewsVideo News

ಮೂರ್ಛೆ ಹೋದ ನಾಗರಹಾವಿಗೆ : ಮರುಜೀವ ನೀಡಿದ ಅಪರೂಪದ ಘಟನೆ..


ರಾಯಚೂರು : ಫಿನಾಯಿಲ್(finayil) ವಾಸನೆಗೆ ಮೂರ್ಛೆ ಹೋದ ನಾಗರಹಾವಿಗೆ(king cobra) ಕೃತಕ ಆಮ್ಲಜನಕ(oxygen) ನೀಡಿ ರಕ್ಷಣೆ ಮಾಡಿದ ಅಪರೂಪದ ಘಟನೆಯೊಂದು ಹಟ್ಟಿ ಪಟ್ಟಣದಲ್ಲಿ ನಡೆದಿದೆ.

ಹೌದು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಚಿನ್ನಗಣಿ(hatti Goldman) ಹೊರವಲಯದಲ್ಲಿ ಬರುವ ಪಾಮನಕಲ್ಲೂರು ಕ್ರಾಸ್ ಬಳಿ ಘಟನೆ ನಡೆದಿದ್ದು, ಇನೋವಾ(inova) ಕಾರ್ ನಲ್ಲಿ ನಾಗರ ಹಾವು ಪತ್ತೆಯಾಗಿತ್ತು. ಕಾರಿನಿಂದ ನಾಗರಹಾವನ್ನು ಹೊರ ತೆಗೆಯಲು ಸಾಕಷ್ಟು ಪ್ರಯತ್ನಪಡಲಾಯಿತು. ಬಳಿಕ ಹಾವು ಹೊರಬರಲು ಫಿನಾಯಿಲ್ ಸಿಂಪಡನೆ ಮಾಡಲಾಗಿದೆ. ಇದರ ವಾಸನೆಗೆ ನಾಗರಹಾವು ಮೂರ್ಛ ತಪ್ಪಿದೆ.

ಲಿಂಗಸುಗೂರಿನ ಉರಗತಜ್ಞ ಖಾಲೀದ್ ಚಾವೂಸ್ ಅವರು ಆಸ್ಪತ್ರೆಗೆ ತಂದು ಕೃತಕ ಆಮ್ಲಜನಕ ಪೂರೈಸಿದ್ದಾರೆ. ಮೊದಲಿಗೆ ಮೂರ್ಛೆ ಹೋಗಿದ್ದ ಹಾವನ್ನು ಸೆರೆ ಹಿಡಿದು ಪೈಪ್ ಸಹಾಯದಿಂದ ಗಾಳಿ ಊದಲಾಯಿತು. ಅದಕ್ಕೆ ಹಾವು ಸ್ಪಂದಿಸಲಿಲ್ಲ. ಕೃತಕ ಆಮ್ಲಜನಕ ನೀಡಿದ ನಂತರ ಮೂರ್ಛೆ ಹೋಗಿದ್ದ ನಾಗಹಾವಿಗೆ ಮರುಜೀವ ಬಂದಂತಾಗಿದೆ. ಬಳಿಕ ಹಾವನ್ನು ಅರಣ್ಯ(Forest) ಪ್ರದೇಶಕ್ಕೆ ಬಿಟ್ಟು ಬರಲಾಗಿದೆ.


[ays_poll id=3]