This is the title of the web page
This is the title of the web page
Local News

ಗ್ರ್ಯಾನುಲೋಮಾಟಸ್ ಕಾಯಿಲೆ ಚಿಕಿತ್ಸೆಗೆ ನೆರವಿಗೆ ಮನವಿ


ರಾಯಚೂರು : ತಾಲೂಕಿನ ಸಿಂಗನೋಡಿ ಗ್ರಾಮದ ಗ್ರಾಮದ ನಿವಾಸಿ ಹಾಜಿ ಲಿ ಮಗ ಅರ್ಮಾನ್ ಮಲಿಕ್ 5 ವರ್ಷ ಹುಡುಗ ಗ್ರ್ಯಾನುಲೋಮಾಟಸ್ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಯ ವೆಚ್ಚ ಭರಿಸಲು ಬಡ ಕುಟುಂಬವು ಪರದಾಡುತ್ತಿದ್ದು, ದಾನಿಗಳ ನೆರವು ನೀಡಬೇಕು ಎಂದು ಸಿಂಗನೋಡಿ ಗ್ರಾಮದ ನಿವಾಸಿ ಪ್ರೇಮ್ ಅವರು ಮನವಿ ಮಾಡಿದ್ದಾರೆ.

ತಂದೆ ಹಾಜಿ ಲಿ ಅವರು ಕೂಲಿ ಕಾರ್ಮಿಕನಾಗಿದ್ದು, ಇವರ ಮಗನಿಗೆ ಗ್ರ್ಯಾನುಲೋಮಾಟಸ್ ಕಾಯಿಲೆ ಬಂದಿದ್ದು, ಬೆಂಗಳೂರಿನ ಹೆಬ್ಬಾಳದ ಅಸ್ಟರ್ ಸಿಎಂಐ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇವರ ಚಿಕಿತ್ಸೆಗೆ 20 ಲಕ್ಷ ರೂ ವೆಚ್ಚವಾಗಲಿದ್ದು, ಈಗಾಗಲೇ ಸಾವಿರಾರು ರೂಪಾಯಿ ಖರ್ಚು ಮಾಡಿರುವ ಬಡ ಕುಟುಂಬ ಹೆಚ್ಚಿನ ಹಣ ಹೊಂದಿಸಲಾಗದೆ ಅಸಹಾಯಕ ಆಗಿದ್ದಾರೆ. ಇವರಿಗೆ ಸಿಂಗನೋಡಿಯಲ್ಲಿ ಸಣ್ಣ ಮನೆಯೊಂದನ್ನು ಹೊರತುಪಡಿಸಿ ಕುಟುಂಬಕ್ಕೆ ಇತರ ಆದಾಯದ ಮೂಲವಿಲ್ಲ. ವೈದ್ಯರು 20 ಲಕ್ಷ ರೂ.ಸೂಚಿಸಿದ್ದಾರಾದರೂ ಹಣ ಹೊಂದಿಸಲಾಗದೆ ಹಾಜಿ ಲಿ ದಾನಿಗಳು ನೆರವಿನ ನಿರಿಕ್ಷೆಯಲ್ಲಿ ಇದ್ದಾರೆ.

ಈಗಲೇ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು 1 ಲಕ್ಷ ರೂ ಗಳನ್ನು ನೀಡಿದ್ದಾರೆ. ಇನ್ನುಳಿದ ಶಾಸಕರು ಕೂಡ ಚಿಕಿತ್ಸೆಗೆ ಹಣ ನೀಡುವ ಭರವಸೆ ನೀಡಿದ್ದಾರೆ. ಅದರಂತೆ ಇನ್ನಿತರ ನೆರವು ನೀಡಲಿಚ್ಚಿಸುವ ದಾನಿಗಳು ಅರ್ಮಾನ್ ಮಲಿಕ್ ಅವರ ತಂದೆ ಅವರ ಬ್ಯಾಂಕ್ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ 110039311288 ಐ. ಎಫ್.ಎಸ್.ಸಿ ಕೊಡ್ CNRB0000519 ಸಂಖ್ಯೆಗೆ ಜಮೆ ಮಾಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಿವಪ್ಪ ನಾಯಕ,ಹಾಜಿ ಲಿ ಸೇರಿದಂತೆ ಇತರರು ಇದ್ದರು.


[ays_poll id=3]