This is the title of the web page
This is the title of the web page
Crime NewsVideo News

ಮರಳು‌ ಸಾಗಿಸುತ್ತಿದ್ದ ಲಾರಿ ಪಲ್ಟಿ : ರೈತರಿಗೆ ಗಂಭೀರ ಗಾಯ.


ಮಾನ್ವಿ : ತಾಲೂಕಿನ ನಾಸ್ಲಾಪುರು ರಾಜ್ಯ ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆ ಮರಳು ಸಾಗಿಸುತ್ತಿದ್ದ ಟಿಪ್ಪ‌ರ್ ಇಬ್ಬರು ರೈತರಿಗೆ ಡಿಕ್ಕಿ ಒಡೆದಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದ್ದರೆ ಮತ್ತೊರ್ವನಿಗೆ ಗಂಭೀರ ಗಾಯಾಗಳಾದ ಘಟನೆ ಸಂಭವಿಸಿದೆ.

ರಾಯಚೂರಿನ ಮಾನ್ವಿ ತಾಲೂಕಿನ ನಸ್ಲಾಪುರ ಗ್ರಾಮದ ಬಳಿ ಘಟನೆ ನಡೆದಿದ್ದು, ಹೆದ್ದಾರಿಯಲ್ಲಿ ಹೊರಟಿದ್ದ ಲಾರಿ ಏಕಾಏಕಿ ರಸ್ತೆ ಬದಿ ನುಗ್ಗಿದೆ. ಈ ವೇಳೆ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಒಬ್ಬ ರೈತನಿಗೆ ಲಾರಿ ಡಿಕ್ಕಿ ಹೊಡೆದಿದೆ. ಇನ್ನೋರ್ವನ ಮೈಮೇಲೆ ಸಂಪೂರ್ಣ ಮರಳು ಬಿದ್ದಿದೆ. ಅತೀ ವೇಗವಾಗಿ ಹೊರಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ರೈತ ಮೈಲಾರಿಗೆ ಗಂಭೀರ ಗಾಯಗೊಂಡಿದ್ದಾನೆ. ಗಾಯಾಳವನ್ನು ಖಾಸಗಿ ಆಸ್ಪತ್ರೆಗೆ ದಾಖಲು, ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಇನ್ನೋರ್ವ ರೈತ ಮಲ್ಲಯ್ಯ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾನೆ.

ತುಂಗಭದ್ರಾ ನದಿ ತೀರದಲ್ಲಿ ಬರುವ, ಚೀಕಲಪರ್ವಿ ಗ್ರಾಮದಿಂದ ಮರಳು ಮಾನ್ವಿಯಿಂದ ಕವಿತಾಳಕ್ಕೆ ಸಾಗಿಸಲಾಗುತಗತಿತ್ತು. ಓವರ್ ಲೋಡ್ ಮರಳು ತುಂಬಿಕೊಂಡು ಅವಸರದಲ್ಲಿ ಹೊರಟಿದ್ದೆ ಘಟನೆಗೆ ಕಾರಣವಾಗಿದೆ. ಲಾರಿ ಪಲ್ಟಿ ಹೊಡೆಯುತ್ತಿದ್ದಂತೆ ಸಣ್ಣಪುಟ್ಟ ಗಾಯಗಳಾಗಿದ್ದರೂ ಚಾಲಕ ಪರಾರಿಯಾಗಿದ್ದಾನೆ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.


[ays_poll id=3]