![]() |
![]() |
![]() |
![]() |
![]() |
ರಾಯಚೂರು : ಕುಡಿಯಲು ನೀರು ತರಲು ಕೃಷ್ಣಾ ನದಿಗೆ ಹೋದ 9 ವಷ೯ದ ಬಾಲಕನನ್ನು ಮೊಸಳೆ ಎಂದು ಹೊತ್ತೊಯ್ದ ಹೃದಯವಿದ್ರಾವಕ ಘಟನೆ ನಡೆದಿದೆ
ಹೌದು ರಾಯಚೂರು ತಾಲೂಕಿನ ಕುರುವಕಲಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಪೋಷಕರು ನೀದಿಗೆ ಹೋಗಿ ಕುಡಿಯಲು ನೀರು ತರಲು ಹೇಳಿದ್ದರು. ಕುಡಿಯುವ ನೀರಿಗಾಗಿ ತೆರಳಿದ್ದ ನವೀನ್ ಹಾಗೂ ಮತ್ತೊಬ್ಬ ಬಾಲಕ, ನೀರು ತುಂಬಿಸಲು ಮುಂದಾದಾಗ ಮೊಸಳೆ ದಾಳಿ ಮಾಡಿ ನವೀನ್ ನನ್ನು ಹೊತ್ತೊಯ್ದಿದೆ ಎಂದು ಹೇಳಲಾಗುತ್ತಿದೆ. ನವೀನ್ (9) ಮೃತ ಬಾಲಕ.
ಬೇಸಿಗೆ ದಿನಗಳಲ್ಲಿ ನದಿಗಳು ಬತ್ತುವುದು ಸಹಜ, ಕೃಷ್ಣ ನದಿ ಬತ್ತಿದರು ಕೂಡ ದೊಡ್ಡ ದೊಡ್ಡ ಗುಂಡಿಗಳಲ್ಲಿ ನೀರು ಶೇಖರಣೆಯಾಗಿರುತ್ತದೆ. ಇಂಥ ಗುಂಡಿಗಳಲ್ಲಿ ಮೊಸಳೆಗಳು ಇರುತ್ತವೆ. ಬೇಸಿಗೆ ಸಂದರ್ಭದಲ್ಲಿ ನೀರಿಗೆ ಬಂದ ಮನುಷ್ಯರು ಧನಕರಗಳನ್ನು ಮೊಸಳೆಗಳು ಆಹಾರವನ್ನಾಗಿ ಮಾಡಿಕೊಳ್ಳುತ್ತವೆ. ಪ್ರಸ್ತುತ ಮೊಸಳೆ ಬಾಯಿಗೆ ತುತ್ತಾಗಿರುವ ಬಾಲಕ ನವೀನ್ ಶವಕ್ಕಾಗಿ ಕೃಷ್ಣಾ ನದಿಯಲ್ಲಿ ಶೋಧ ಕಾರ್ಯ ಆರಂಭವಾಗಿದ್ದು, ಯಾಪಲದಿನ್ನಿ ಪೊಲೀಸರು, ಅಗ್ನಿಶಾಮಕ ದಳ ಜೊತೆಗೆ ಸ್ಥಳೀಯರಿಂದ ಕಾರ್ಯಾಚರಣೆ ನಡೆಸಿದ್ದಾರೆ. ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
![]() |
![]() |
![]() |
![]() |
![]() |
[ays_poll id=3]