This is the title of the web page
This is the title of the web page
Local NewsState NewsVideo News

90 ಸಾವಿರ ವೇತನ : ಕಾಲೇಜಿನಲ್ಲಿ ಕದ್ದಿದ್ದು ಇಟ್ಟಿಗೆ..


K2kannadanews.in

(Viral News)ಮಾನ್ವಿ : ಮಾಸಿಕ 90 ಸಾವಿರ ವೇತನ(90k salary) ಪಡೆಯುವ ಸರಕಾರ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕನೋರ್ವ (government digre college staff) , ಕಾಲೇಜು ಆವರಣದಲ್ಲಿ ಇದ್ದ ಇಟ್ಟಿಗೆ(Brick’s) ಕದಿಯುತ್ತಿದ್ದ ವೇಳೆ, ಸ್ಥಳಿಯರ ಕೈಗೆ ಸಿಕ್ಕು ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.

ಹೌದು ರಾಯಚೂರು ಜಿಲ್ಲೆಯ ಮಾನ್ವಿ(manvi) ಪಟ್ಟಣದಲ್ಲಿ ಇರುವ ಭಾಷುಮಿಯಾ ಸಾಹುಕಾರ್ ಪ್ರಥಮ ದರ್ಜೆ ಕಾಲೇಜಿನ, ಕನ್ನಡ (Kannada) ಪ್ರಾಧ್ಯಾಪಕ ಡಾ.ಚನ್ನಬಸವ ಮಾಡಗಿರಿ ಅವರಿಗೆ ಸ್ಥಳಿಯರು ಚಳಿ ಬಿಡಿದಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ (viral in social media) ಭಾರಿ ವೈರಲ್ ಆಗಿದೆ. ಕಾಲೇಜು ಆವರಣದಲ್ಲಿ ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ. ಈ ಕಟ್ಟಡಕ್ಕಾಗಿ ತಂದಿರಿಸಿದ್ದ ಇಟ್ಟಿಗೆಗಳನ್ನು ಹಾಡು ಹಗಲೇ ದ್ವಿ ಚಕ್ರ (baik) ವಾಹನದಲ್ಲಿ ಚೀಲಕ್ಕೆ ತುಂಬಿಕೊಂಡು, ಮನೆಗೆ ತೆಗೆದುಕೊಂಡು ಹೋಗುತ್ತಿರುವುದನ್ನು ಸ್ಥಳಿಯರು ಗಮನಿಸಿದ್ದಾರೆ. ಮೊದಲು ಒಂದು ಚೀಲದಲ್ಲಿ ತುಂಬಿಕೊಂಡು ಹೋದಾಗ ಸುಮ್ಮನಿದ್ದ ಸ್ಥಳಿಯರು, ಎರಡನೆ ಬಾರಿ ತೆಗೆದುಕೊಂಡು ಹೋಗುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ.

ಖಾಯಂ ಸಿಬ್ಬಂದಿಯಾಗಿರುವ ಇವರು ಮಾಸಿಕ 90 ಸಾವಿರ ವೇತನ ಪಡೆಯುತ್ತಾರೆ. ಮಕ್ಕಳಿಗೆ ಏನಾದ್ರು ಫ್ರೀಯಾಗಿ ಕಲಿಸ್ತಿರಾ. ನಾಳೆದಿನ ಕಾಲೇಜಿನಲ್ಲಿ ಏನಾದ್ರು ಕಳ್ಳತನವಾದ್ರೆ ಏನುಗತಿ ಎಂದೆಲ್ಲ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮಾಡಿದ ತಪ್ಪಿಗೆ ಕ್ಷಮೆಕೇಳಿ, ಪೇಚಿಗೆ ಸಿಲುಕಿ, ತಲೆ ಕೆಳಗೆ ಹಾಕಿ ಅಲ್ಲಿಂದ ಕಾಲ್ಕಿತ್ತಿದ್ದಾರೆ ಪ್ರಾಧ್ಯಾಪಕ ಚನ್ನಬಸವ.


[ays_poll id=3]