
K2 ನ್ಯೂಸ್ ಡೆಸ್ಕ್ : ಇಂದು ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನ ಉದ್ಘಾಟನೆ ನೆರವೇರಿಸಲಿದ್ದಾರೆ ಇದೇ ಒಂದು ಸಂದರ್ಭದಲ್ಲಿ, ದೇಶಾದ್ಯಂತ 75 ರೂಪಾಯಿ ನಾಣ್ಯಗಳನ್ನು ಬಿಡುಗಡೆ ಮಾಡಿ, ಚಲಾವಣೆಗೆ ಚಾಲನೆ ನೀಡಲಿದ್ದಾರೆ.
ಇನ್ನು 2000 ಲೋಕಸಭೆಯ ನೋಟುಗಳನ್ನು ಹಿಂಪಡೆಯುತ್ತಿರುವ ಕೇಂದ್ರ ಸರ್ಕಾರ, ಹೊಸ ನಾಣ್ಯವನ್ನು ಪರಿಚಯಿಸಲು ಮುಂದಾಗಿದೆ. ನೂತನ ಸಂಸತ್ ಭವನ ಉದ್ಘಾಟನೆ ಮಾಡುತ್ತಿರುವ ಸುಸಂದರ್ಭದಲ್ಲಿ ಹೊಸ ನಾಣ್ಯ ಬಿಡುಗಡೆ ಮಾಡಲಿದ್ದಾರೆ. ಈ ನಾಣ್ಯ 35 ಗ್ರಾಂ ತೂಕ ಹೊಂದಿದ್ದು, ಹಿಂಭಾಗದಲ್ಲಿ ಅಶೋಕ ಸ್ತಂಭದ ಕೆಳಗೆ 75 ರೂಪಾಯಿ ಮುಖಬೆಲೆ ಹಾಗೂ ಬಲ ಭಾಗದಲ್ಲಿ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಭಾರತ ಎಂದು ಬರೆಯಲಾಗಿದೆ. ನಾಣ್ಯದ ಇನ್ನೊಂದು ಬದಿಯಲ್ಲಿ ನೂತನ ಸಂಸತ್ ಭವನದ ಚಿತ್ರವಿದೆ, ಕೆಳಗೆ 2023 ಎಂದು ಬರೆಯಲಾಗಿದೆ.
![]() |
![]() |
![]() |
![]() |
![]() |
[ays_poll id=3]