
K2 ವೈರಲ್ ನ್ಯೂಸ್ : ಸಾಮಾನ್ಯವಾಗಿ ಬೈಕ್ ಮೇಲೆ ಮೂರನೇ ವ್ಯಕ್ತಿ ಪ್ರಯಾಣಿಸುವುದನ್ನು ಕಂಡರೆ ಪೊಲೀಸರು ದಂಡ ಹಾಕಲು ಮುಂದಾಗುತ್ತಾರೆ. ಆದರೂ ಪೊಲೀಸರ ಕಣ್ಣುತಪ್ಪಿಸಿ ಎಲ್ಲೋ ನಾಲ್ಕು ಜನ ಸಾಗುವುದನ್ನು ನೋಡಿರುತ್ತೀರಿ. ಆದರೆ ಇಲ್ಲೊಂದು ವಿಡಿಯೋ ವೈರಲ್ ಆಗಿದೆ. ಆ ವಿಡಿಯೋ ನೋಡಿದರೆ ನಿಮಗು ಆಶ್ಚರ್ಯ ಆಗುತ್ತೆ.
ಆದರೆ ಬೈಕ್‌ನಲ್ಲಿ ಎರಡು ನಾಯಿಗಳು, ಒಂದು ಕೋಳಿ ಮತ್ತು ಭಾರೀ ಸಾಮಾನುಗಳೊಂದಿಗೆ ಒಂದೇ ಬಾರಿಗೆ ಏಳು ಜನರು ಪ್ರಯಾಣಿಸುವುದನ್ನು ಕಂಡಿದ್ದೀರಾ!? ಇಲ್ಲಿದೆ ನೋಡಿ..
ವೈರಲ್ ಆಗಿರುವ ವಿಡಿಯೋ ನೋಡಿದ್ರೆ ಇಡೀ ಕುಟುಂಬವೇ ಬೈಕ್ ಮೇಲೆ ಪ್ರಯಾಣಿಸುತ್ತಿರುವಂತೆ ಇದೆ. ಬೈಕ್ ಓಡಿಸುವ ವ್ಯಕ್ತಿ, ಮುಂದೆ ಇಬ್ಬರು ಮಕ್ಕಳು, ಹಿಂದೆ ಪತ್ನಿ, ಆಕೆಯ ಮೇಲೆ ಮಗು, ಆ ಮಗುವಿನ ಹಿಂದೆ ಇನ್ನಿಬ್ಬರು ಮಕ್ಕಳು ಕುಳಿತಿದ್ದಾರೆ. ಅವುಗಳ ಜೊತೆಗೆ ಎರಡು ನಾಯಿ ಮರಿಗಳೂ, ಒಂದು ಕೋಳಿಯೂ ಇದ್ದವು. ಇದಲ್ಲದೆ, ಅವರೊಂದಿಗೆ ಇನ್ನೂ ಅನೇಕ ಸಾಮಾನುಗಳೂ ಇದ್ದವು. ಇದನ್ನು ಕಂಡು ನೆಟಿಜನ್‌ಗಳು ನಾನಾ ರೀತಿಯ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.
![]() |
![]() |
![]() |
![]() |
![]() |
[ays_poll id=3]