This is the title of the web page
This is the title of the web page
Local NewsState News

4 ವರ್ಷದಲ್ಲಿ 6,765 ಮಕ್ಕಳ ಅಸಹಜ ಸಾವು..!


K2kannadanews.in

ನ್ಯೂಸ್ ಡೆಸ್ಕ್ : ರಾಜ್ಯದಲ್ಲಿ ಮಕ್ಕಳ ಅಸಹಜ ಸಾವು (Unnatural death of children) ಹೆಚ್ಚಾಗಿದೆ. ಈ ಬಗ್ಗೆ ಸಂಸ್ಥೆಯೊಂದು ಸಮೀಕ್ಷೆ ಅಚ್ಚರಿ ಸಂಗತಿ ಮಾಹಿತಿ ಬಹಿರಂಗ ಪಡಿಸಿದೆ. ಕಳೆದ 4 ವರ್ಷಗಳಲ್ಲಿ 6,765 ಮಕ್ಕಳು ಅಸಹಜ ಸಾವು ಅಸಹಜವಾಗಿದೆ ಎಂದು ಮೈಸೂರಿನ (Mysore) ಒಡನಾಡಿ ಸೇವಾ ಸಂಸ್ಥೆಗೆ ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ (SCRB) ಮಾಹಿತಿ ನೀಡಿದೆ.

ತಾಯಿ-ಮಗುವಿನ ಸಾವು, ಕೃಷಿ ಹೊಂಡಗಳಿಗೆ ಬಿದ್ದು ಸಾವು, ಆತ್ಮಹತ್ಯೆ(suicide) ಸೇರಿದಂತೆ ರಾಜ್ಯದಲ್ಲಿ ಮಕ್ಕಳ ಅಸಹಜ ಸಾವುಗಳ ಕುರಿತು ಒಡನಾಡಿ ಸಂಸ್ಥೆಯು ಜಿಲ್ಲಾವಾರು ಮಾಹಿತಿಯನ್ನು ಪಡೆದಿದೆ. 2019ರಲ್ಲಿ 1,574, 2020ರಲ್ಲಿ 1,534, 2021ರಲ್ಲಿ 1,728 ಹಾಗೂ 2022ರಲ್ಲಿ 1,929 ಮಕ್ಕಳು ಅಸಹಜ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಕರ್ನಾಟಕ (Karnataka) ರೈಲ್ವೇ ಪೊಲೀಸ್ ಠಾಣೆಗಳು(railway police station) ನಾಲ್ಕು ವರ್ಷಗಳಲ್ಲಿ ಮಕ್ಕಳ ಅಸಹಜ ಸಾವಿನ 406 ಪ್ರಕರಣಗಳನ್ನು ವರದಿ ಮಾಡಿದೆ. 2019 ರಲ್ಲಿ 75 ಸಾವು ಪ್ರಕರಣಗಳು ದಾಖಲಾಗಿದ್ದು, 2020 ರಲ್ಲಿ (COVID-19 ಸಾಂಕ್ರಾಮಿಕ ಸಮಯ) ಈ ಸಂಖ್ಯೆ 12ಕ್ಕೆ ಇಳಿಯಿತು. ಆದಾಗ್ಯೂ, 2021 ರಲ್ಲಿ ಸಂಖ್ಯೆಗಳು 106 ಕ್ಕೆ ಹಾಗೂ 2022 ರಲ್ಲಿ 213 ಕ್ಕೆ ಏರಿತು.

ಕುಟುಂಬಗಳ ಆತ್ಮಹತ್ಯೆ(family suicide), ಮೊಬೈಲ್ ಫೋನ್(mobile phone), ಶಿಕ್ಷಣಕ್ಕೆ ನಿರಾಕರಣೆ (education opposed) ಅಥವಾ ಉತ್ತಮ ಆಹಾರವನ್ನು ನಿರಾಕರಿಸಿದಾಗ ಮಕ್ಕಳು ತಮ್ಮ ಜೀವನವನ್ನು ಕೊನೆಗೊಳಿಸಿರಬಹುದು ಎಂದಿದ್ದಾರೆ. ಶಿಕ್ಷಣವನ್ನು ನಿರಾಕರಿಸಿ ಬಾಲ್ಯವಿವಾಹಕ್ಕೆ(child marriage) ಒತ್ತಾಯಿಸಿದಾಗ ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳೂ ಇವೆ. ತಮ್ಮ ಕುಟುಂಬ ಸದಸ್ಯರು ತಮ್ಮ ಜಾತಿಗೆ ಅಥವಾ ಸಮುದಾಯಕ್ಕೆ ಸೇರದ ಸಂಗಾತಿಯೊಂದಿಗಿನ ಪ್ರೀತಿಸುವುದನ್ನು ವಿರೋಧಿಸಿದಾಗ ಮಕ್ಕಳು ಸಹ ಮರ್ಯಾದಾ ಹತ್ಯೆಗೆ ಬಲಿಯಾಗುತ್ತಾರೆ ಎಂದಿದ್ದಾರೆ.


[ays_poll id=3]