ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ 4062 ಹುದ್ದೆ ಅಧಿಸೂಚನೆ ಪ್ರಕಟ ಶಿಕ್ಷಕ, ಶಿಕ್ಷಕೇತರ ಹುದ್ದೆ ಭರ್ತಿಗೆ ಅಧಿಸೂಚನೆ ಪ್ರಕಟ

K2 ಜಾಬ್ ನ್ಯೂಸ್ : ಬುಡಕಟ್ಟು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಕೇಂದ್ರ ಸರ್ಕಾರದಿಂದ ಸ್ಥಾಪಿತವಾಗಿರುವ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಮುಂದಿನ ಮೂರು ವರ್ಷ ಭರ್ಜರಿ ಉದ್ಯೋಗ ನೇಮಕಾತಿ ನಡೆಸಲಾಗುವುದು ಎಂದು 2023ರ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ ಬೆನ್ನಲ್ಲೇ 4062 ಹುದ್ದೆ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.
ಶೈಕ್ಷಣಿಕ ಕ್ಷೇತ್ರದದ ಉದ್ಯೋಗಾಕಾಂಕ್ಷಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ದೇಶದೆಲ್ಲೆಡೆ ಸ್ಥಾಪಿತವಾಗಿರುವ ವಸತಿ ಶಾಲೆಯಲ್ಲಿ ಉದ್ಯೋಗ ನಿರ್ವಹಣೆಗೆ ಅಧಿಸೂಚನೆ ಪ್ರಕಟಿಸಲಾಗಿದೆ. ವಸತಿ ಶಾಲೆಯಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿಗೆ ಆದೇಶ ಹೊರಡಿಸಲಾಗಿದೆ. ದೇಶಾದ್ಯಂತ ಈ ನೇಮಕಾತಿ ನಡೆಯಲಿದೆ. ಒಟ್ಟು 4062 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಹುದ್ದೆ, ನೇಮಕಾತಿ ಪ್ರಕ್ರಿಯೆ ಸೇರಿದಂತೆ ಅಗತ್ಯ ಮಾಹಿತಿಗಳು ಇಲ್ಲಿದೆ.
ಹುದ್ದೆ ವಿವರ: ಏಕಲವ್ಯ ಶಾಲೆಯಲ್ಲಿ 303 ಪ್ರಿನ್ಸಿಪಾಲ್, 2266 ಪಿಜಿಟಿ, 361 ಅಕೌಂಟೆಟ್, 759 ಜ್ಯೂ ಸೆಕ್ರೆಟರಿ ಅಸಿಸ್ಟಂಸ್, 373 ಲ್ಯಾಬ್ ಅಟೆಂಡಂಟ್ ಸೇರಿದಂತೆ ಒಟ್ಟು 4062 ಹುದ್ದೆಗಳ ಭರ್ತಿ ನಡೆಯಲಿದೆ.
ವಿದ್ಯಾರ್ಹತೆ- ವಯೋಮಿತಿ
*ಪ್ರಿನ್ಸಿಪಾಲ್ : ಬಿಎಡ್ ಮತ್ತು ಸ್ನಾತಕೋತ್ತರ ಪದವಿ- 50
*ಪಿಜಿಟಿ: ಸ್ನಾತಕೋತ್ತರ ಪದವಿ, ಬಿಎಡ್, – 40 ವರ್ಷ
*ಅಕೌಂಟೆಂಟ್: ವಾಣಿಜ್ಯ ಪದವಿ- 30 ವರ್ಷ
*ಜ್ಯೂ ಸೆಕ್ರೆಟ್ರಿಯಟ್ ಅಸಿಸ್ಟಂಟ್- ಪಿಯುಸಿ- 30 ವರ್ಷ
*ಲ್ಯಾಬ್ ಅಟೆಂಡೆಟ್- ಎಸ್ಎಸ್ಎಲ್ಸಿ- 30 ವರ್ಷ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಆನ್ಲೈನ್ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ. ಇತರ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ 2000, 1500, 1000 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ.
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಈ ಹುದ್ದೆಗಳಿಗೆ ಹುದ್ದೆಗಳಿಗೆ ಅನುಸಾರವಾಗಿ 18 ಸಾವಿರದಿಂದ 2,09,200 ರೂ ವರೆಗೆ ವೇತನ ನಿಗದಿ ಪಡಿಸಲಾಗಿದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ಜೂನ್ 28ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 31 ಆಗಿದೆ. ಈ ಹುದ್ದೆ ಕುರಿತು ವಿವರವಾದ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ಏಕಲವ್ಯ ಮಾದರಿ ವಸತಿ ಶಾಲೆಯ ಅಧಿಕೃತ ಜಾಲತಾಣವಾದ emrs.tribal.gov.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.
![]() |
![]() |
![]() |
![]() |
![]() |
[ays_poll id=3]