
ರಾಯಚೂರು : ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಹಾಲು ಒಕ್ಕೂಟ ಏಪ್ರಿಲ್‌ನಿಂದ ಪ್ರತಿ ತಿಂಗಳು 40 ಲಕ್ಷ ನಷ್ಟ ಅನುಭವಿಸುತ್ತಿದೆ. ವಿದ್ಯುತ್, ಇಂಧನ ಹೊಂದಾಣಿಕೆ ವೆಚ್ಚ ಏರಿಕೆ ಬಿಸಿ ಜತೆ ದುಬಾರಿ ಕಚ್ಚಾ ವಸ್ತುಗಳು ನಷ್ಟಕ್ಕೆ ಕಾರಣವಾಗಿದೆ.
ಬಳ್ಳಾರಿ ಡೇರಿ, ಕೊಪ್ಪಳ ತಾಲ್ಲೂಕು ಬೂದುಗುಂಪ ಡೇರಿ ಸೇರಿ ತಿಂಗಳಿಗೆ 25 ಲಕ್ಷ ವಿದ್ಯುತ್ ಬಿಲ್ ಬರುತ್ತಿತ್ತು. ಈಗ 37 ಲಕ್ಷ ಬಿಲ್ ಬರುತ್ತಿದೆ ಎಂದು ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಟಿ. ತಿರುಪತ್ತಪ್ಪ ತಿಳಿಸಿದರು. ಪ್ರತಿ ಲೀಟರ್ ಹಾಲಿಗೆ 1.50 ನಷ್ಟವಾಗುತ್ತಿದೆ. ಅದರಲ್ಲೂ ನೀಲಿ ಪ್ಯಾಕೆಟ್‌ನಿಂದ 2.50ನಷ್ಟ ಆಗುತ್ತಿದೆ. ಶುಭಂ ಗೋಲ್ಡ್ ಮತ್ತು ಶುಭಂ ಸೇರಿ ಮಿಕ್ಕ ಪ್ಯಾಕೆಟ್‌ಗಳಿಂದ ನಷ್ಟ ಸ್ವಲ್ಪ ಕಡಿಮೆ ಇದೆ. ಲೀಟರ್‌ಗೆ ಸರಾಸರಿ 1.50 ನಷ್ಟವಾಗುತ್ತಿದೆ. ಮೊಸರು ಲೀಟರ್‌ಗೆ 50 ಪೈಸೆ ನಷ್ಟವಾಗುತ್ತಿದೆ. ರಾಬಕೊವಿ ದಿನಕ್ಕೆ 1.70ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದೆ. ಇದರಲ್ಲಿ 10 ಸಾವಿರ ಲೀಟರ್ ಮೊಸರಿಗೆ ಬಳಸುತ್ತಿದೆ. ಒಕ್ಕೂಟದ ವ್ಯಾಪ್ತಿಯ ಸಂಘಗಳಿಂದ 1.60 ಲಕ್ಷ ಲೀಟರ್ ಬರುತ್ತಿದೆ. ಚಿತ್ರದುರ್ಗ ಹಾಗೂ ಶಿವಮೊಗ್ಗ ಹಾಲು ಒಕ್ಕೂಟಗಳಿಂದ 10 ಸಾವಿರ ಲೀಟರ್ ತರಿಸಲಾಗುತ್ತಿದೆ. ರೈತರಿಗೆ ಲೀಟರ್‌ಗೆ 31, ನೆರೆಯ ಡೇರಿಗಳ ಹಾಲಿಗೆ ಸಾರಿಗೆ ವೆಚ್ಚ ಸೇರಿ 37 ಖರ್ಚಾಗುತ್ತಿದೆ. ಇದೂ ಹೊರೆ ಆಗಿದೆ ಎಂದು ತಿರುಪತ್ತಪ್ಪ ಸ್ಪಷ್ಟಪಡಿಸಿದರು.
ಆಕಳುಗಳಿಗೆ ಚರ್ಮ ಗಂಟು ರೋಗ ತಗುಲಿದ್ದರಿಂದ ಹಾಲು ಉತ್ಪಾದನೆ ಕುಂಠಿತ ಆಗಿದೆ. ರಾಬಕೊವಿ ವ್ಯಾಪ್ತಿ ಸಂಘಗಳು ದಿನಕ್ಕೆ ಸರಾಸರಿ 1.80 ಲಕ್ಷ ಲೀಟರ್ ಹಾಲು ಪೂರೈಸುತ್ತಿದ್ದವು. ಈಗ 20 ಸಾವಿರ ಲೀಟರ್ ಕಡಿಮೆಯಾಗಿದೆ. ದನಗಳಿಗೆ ಒಣಹುಲ್ಲು ಸಿಗುತ್ತಿಲ್ಲ. ಪರಿಣಾಮವಾಗಿ ಉತ್ಪಾದನಾ ವೆಚ್ಚ ಹೆಚ್ಚಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ನಷ್ಟಕ್ಕೆ ಕಾರಣ ವಿವರಿಸಿದರು.
![]() |
![]() |
![]() |
![]() |
![]() |
[ays_poll id=3]