This is the title of the web page
This is the title of the web page
National NewsPolitics News

ಕಾಂಗ್ರೆಸ್ ಸರ್ಕಾರಕ್ಕೂ ಅಂಟಿದ ಶೇ.40 ಕಮಿಷನ್ ದಂಧೆ : ಗುತ್ತಿಗೆದಾರ ಸಂಘ ಆರೋಪ..


K2kannadanews.in

40% Commission : ಬಿಜೆಪಿ (BJP) ಸರ್ಕಾರದಲ್ಲಿದ್ದ ಶೇ.40 ಕಮಿಷನ್ ದಂಧೆ, ಸಿದ್ದರಾಮಯ್ಯ (SIDDARAMAYYA) ನೇತೃತ್ವದ ಕಾಂಗ್ರೆಸ್ (congress) ಸರ್ಕಾರದಲ್ಲಿಯೂ ಮುಂದುವರಿದಿದೆ ಎಂದು ರಾಜ್ಯ ಗುತ್ತಿಗೆದಾರರ (Contractor) ಸಂಘ ಆರೋಪಿಸಿದೆ ಅಸಮಧಾನ ಹೊರಹಾಕಿದೆ.

ಹಣ ಬಿಡುಗಡೆಯಲ್ಲಿ ಜ್ಯೇಷ್ಠತೆ ಪಾಲನೆಯಾಗುತ್ತಿಲ್ಲ. ಸಚಿವರು (minister), ಶಾಸಕರು(MLA), ಹಿರಿಯ ಅಧಿಕಾರಿಗಳು (Senior officer) ಸೂಚಿಸುವರಿಗೆ ಮಾತ್ರ ಬಾಕಿ ಮೊತ್ತ ಬಿಡುಗಡೆ ಮಾಡಲಾಗುತ್ತಿದೆ. ಕಾಮಗಾರಿ (Work) ಪೂರ್ಣಗೊಳಿಸಿ 2 ವರ್ಷ ಕಳೆದರೂ ಹಣ ಬಿಡುಗಡೆ ಮಾಡಲು ಮೀನಮೇಷ ಎಣಿಸಲಾಗುತ್ತಿದೆ. ಗುತ್ತಿಗೆದಾರರ ಬಳಿ ಮೊದಲು ಸಚಿವರು, ಶಾಸಕರು ನೇರವಾಗಿ ಕಮಿಷನ್ ಕೇಳುತ್ತಿದ್ದರು.

ಇದೀಗ ಅಧಿಕಾರಿಗಳೇ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಸದ್ಯದಲ್ಲೇ ಅಧಿಕಾರಿಗಳ (Officer name) ಹೆಸರುಗಳನ್ನು ದಾಖಲೆ (Document) ಸಮೇತ ಬಿಡುಗಡೆ ಮಾಡಲಾಗುವುದು. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಮೇಲಿನವರಿಗೆ ನೀಡಬೇಕು ಎನ್ನುತ್ತಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಏಜೆಂಟ್ ದರ್ಬಾರ್ (Agent) ದಂಧೆ ರಾಜೋರೋಷವಾಗಿ ನಡೆಯುತ್ತಿದೆ. ಜತೆಗೆ, ಅಧಿಕಾರಿಗಳ ಭ್ರಷ್ಟಾಚಾರವೂ ಮೀತಿ ಮೀರಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಸಂಘದ ಅಧ್ಯಕ್ಷ ಕೆಂಪಣ್ಣ ಒತ್ತಾಯಿಸಿದರು.


[ays_poll id=3]