
ರಾಯಚೂರು : ಪ್ರಸ್ತುತ ವರ್ಷದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ನಾಲ್ಕು ತಾಲೂಕುಗಳು ಸೇರಿದಂತೆ ರಾಜ್ಯದಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.20 ರಿಂದ 59 ರಷ್ಟು ಹಾಗೂ ಅದಕ್ಕಿಂತ ಹೆಚ್ಚಿನ ಮಳೆ ಕೊರತೆ ಎದುರಿಸುತ್ತಿರುವ 113 ತಾಲೂಕುಗಳ ಪಟ್ಟಿಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSDMC) ಸಿದ್ಧಪಡಿಸಿದೆ.
ರಾಜ್ಯದಲ್ಲಿ ಬರ ಉದ್ಬವಿಸುವ 113 ತಾಲೂಕುಗಳ ಪಟ್ಟಿಯನ್ನು ಸದ್ಯ ರಾಜ್ಯ ಸರ್ಕಾರ ಸಿದ್ಧಪಡಿಸಿಕೊಂಡಿದೆ. ಆದರೆ, ರಾಜ್ಯದಲ್ಲಿ ಇದೇ ರೀತಿ ಮಳೆ ಕೊರತೆ ಮುಂದುವರೆದರೆ, ರಾಜ್ಯದ 236 ತಾಲೂಕುಗಳ ಪೈಕಿ ಶೇ.80ರಷ್ಟು ತಾಲೂಕುಗಳು ಬರ ಪೀಡಿತ ಪಟ್ಟಿಗೆ ಸೇರುವ ಆತಂಕ ವ್ಯಕ್ತವಾಗಿದೆ. ಮುಂಗಾರು ಆರಂಭಗೊಂಡ ಜೂನ್‌ನಿಂದ ಈವರೆಗೆ ವಾಡಿಕೆ ಪ್ರಕಾರ ರಾಜ್ಯದಲ್ಲಿ 686 ಮಿ.ಮೀ ಮಳೆಯಾಗಬೇಕಾಗಿತ್ತು. ಆದರೆ, ಈವರೆಗೆ ಕೇವಲ 496 ಮಿ.ಮೀ ನಷ್ಟುಮಳೆಯಾಗಿದ್ದು, ಶೇ.28 ರಷ್ಟುಮಳೆ ಕೊರತೆ ಉಂಟಾಗಿದೆ. 31 ಜಿಲ್ಲೆಗಳಲ್ಲಿ 19 ಜಿಲ್ಲೆಗಳು ಮಳೆ ಕೊರತೆ ಎದುರಿಸುತ್ತಿದ್ದು, ಉಳಿದ 12 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದೆ.
ಕಲ್ಯಾಣ ಕರ್ನಾಟಕದ ಜಿಲ್ಲೆಗಳನ್ನು ನೋಡುವುದಾದರೆ ರಾಯಚೂರು 4, ಕಲಬುರಗಿ 3, ಬೀದರ್ 4, ಬಳ್ಳಾರಿ 4, ಕೊಪ್ಪಳ 5, ಯಾದಗಿರಿ 3, ವಿಜಯನಗರ 3 ಬರಗಾಲ ಬೇಡಿದ ತಾಲೂಕುಗಳೆಂದು ಘೋಷಣೆ ಮಾಡಲು ಸಿದ್ಧಗೊಂಡಿದೆ. ಇನ್ನೂ ಮಳೆ ಕೊರತೆ ಎದುರಾಗಿದೆ ಎಂದು ನಿರ್ಧರಿಸಲು ಮಳೆ ಕೊರತೆ, ಸತತ ಮೂರು ವಾರ ಮಳೆ ಕೊರತೆ, ಶೇ.75ಕ್ಕಿಂತ ಹೆಚ್ಚು ಕೃಷಿ ಬಿತ್ತನೆ ಕೊರತೆ, ಉಪಗ್ರಹ ಆಧಾರಿತ ಬೆಳೆ ಆರೋಗ್ಯ ಸೂಚ್ಯಂಕ, ತೇವಾಂಶ ಕೊರತೆ, ಅಂತರ್ಜಲ ಮಟ್ಟದ ಸೂಚ್ಯಂಕದ ಆಧಾರದ ಮೇಲೆ ಬರಗಾಲ ಬೇಡಿತ ಎಂದು ಘೋಷಣೆ ಮಾಡಲಾಗುತ್ತದೆ.
![]() |
![]() |
![]() |
![]() |
![]() |
[ays_poll id=3]