
K2 ಕ್ರೈಂ ನ್ಯೂಸ್ : ಪ್ರಸ್ತುತ ದಿನದಲ್ಲಿ ಕಾಮುಕರು, ದುಷ್ಟರಿಂದ ಪುಟ್ಟ ಪುಟ್ಟ ಮಕ್ಕಳನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬ ದೊಡ್ಡ ಪ್ರಶ್ನೆ ಸಮಾಜ ಮತ್ತು ಪಾಲಕರಲ್ಲಿ ಹುಟ್ಟುಹಾಕಿದೆ ಭಯಾನಕ ಘಟನೆ. ವಿಕೃತ ಕಾಮಿಯೊಬ್ಬ ಇನ್ನೂ ಜಗತ್ತನ್ನೇ ಅರಿಯದ ಪುಟ್ಟ ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ್ದಾನೆ.
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಕೊಂಚಾವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಎಂಟು ವರ್ಷದ ಬಾಲಕಿ ಮತ್ತು ಆಕೆಯ ತಮ್ಮ, ಆರು ವರ್ಷದ ಬಾಲಕನ ಮೇಲೆ 6 ವರ್ಷದ ಬಾಲಕ ಮತ್ತು 8 ವರ್ಷದ ಬಾಲಕಿಗೆ ಲೈಂಗಿಕವಾಗಿ ಹಿಂಸೆ ನೀಡಿದ ಆರೋಪ ಕೇಳಿಬಂದಿದೆ. ಕೊಂಚಾವರಂ ಮೂಲದ ಸಚಿನ್ ಚವಾಣ್(21) ಅಮಾನುಷವಾಗಿ ನಡೆದುಕೊಂಡವನು ಎನ್ನಲಾಗುತ್ತಿದೆ. ಮನೆಯಲ್ಲಿ ಯಾರು ಇಲ್ಲದ್ದನ್ನ ಗಮನಿಸಿ, ಅವರ ಪಾಲಿಗೆ ಒಬ್ಬ ಮಾವನೋ, ಚಿಕ್ಕಪ್ಪನೋ, ಬಂಧುವೋ ಆಗುವ ವಯಸ್ಸಿನ ಈ ದುಷ್ಟ ಆ ಮಕ್ಕಳ ಮೇಲೆ ಎರಗಿದ್ದಾನೆ ಎನ್ನಲಾಗಿದೆ.
ಮಕ್ಕಳನ್ನು ಪುಸಲಾಯಿಸಿ ತನ್ನ ದುಷ್ಕತ್ಯಕ್ಕೆ ಬಳಸಿಕೊಂಡಿದ್ದಾನೆ ಚವಾಣ್. ಬಾಲಕಿಯ ಮೇಲೆ ಮೊದಲು ದೌರ್ಜನ್ಯ ನಡೆಸಿದ ಆತ ಇನ್ನೂ ಆರು ವರ್ಷದ ಪುಟ್ಟ ಬಾಲಕನಿಗೂ ಹಿಂಸೆ ನೀಡಿದ್ದಾನೆ. ಮಕ್ಕಳ ಹೆತ್ತವರು ಮನೆಗೆ ಬಂದಾಗ ಈ ಮಕ್ಕಳು ನೋವು ಎಂದು ಹೇಳಿಕೊಂಡಾಗ ವಿಚಾರಿಸಲಾಗಿದೆ. ಆಗ ಸಚಿನ್ ಚವಾಣ್ ಮನೆಗೆ ಬಂದಿದ್ದು, ಆತ ಈ ರೀತಿಯಾಗಿ ನಡೆದುಕೊಂಡಿದ್ದು ಬೆಳಕಿಗೆ ಬಂದಿದೆ. ಕೂಡಲೇ ಮನೆಯವರು ಸಚಿನ್ ಚವಾಣ್ ಮೇಲೆ ಕೇಸು ದಾಖಲಿಸಿದ್ದಾರೆ. ಪೋಕ್ಸೊ ಪ್ರಕರಣದಡಿ ಕೇಸು ದಾಖಲಿಸಿಕೊಂಡಿರುವ ಪೊಲೀಸರು ಆತನನ್ನು ಬಂಧಿಸಿದ್ದಾರೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]