
ರಾಯಚೂರು : ಕ್ಷೀರಭಾಗ್ಯ ಯೋಜನೆಯ ಹಾಲಿನಲ್ಲಿ ಜಿರಳೆ ಬಿದ್ದಿದ್ದು, ಆ ಹಾಲನ್ನ ಸೇವಿಸಿ ಇಪ್ಪತ್ತಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಘಟನೆ ಇಡಪನೂರು ಗ್ರಾಮದಲ್ಲಿ ಜರುಗಿದೆ.
ರಾಯಚೂರು ತಾಲೂಕಿನ ತಲಮಾರಿ ಗ್ರಾಮದಲ್ಲಿ ಶುಕ್ರವಾರ ಘಟನೆ ಜರುಗಿದೆ. ತಲಮಾರಿ ಗ್ರಾಮದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬೆಳಗ್ಗೆ 10 ಗಂಟೆಗೆ ನೀಡಿದ ಹಾಲಿನಲ್ಲಿ ಜಿರಳೆ ಬಿದ್ದಿದ್ದು , ಅದೇ ಹಾಲನ್ನ ಸೇವಿಸಿ 20 ಮಕ್ಕಳು ಅಸ್ವಸ್ಥಗೊಂಡಿದ್ದು. ಇಡುಪನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹಾಲಿನಲ್ಲಿ ಜಿರಳೆ ಇರುವ ವಿಷಯ ತಿಳಿದು ಭಯಗೊಂಡ ವಿದ್ಯಾರ್ಥಿಗಳನ್ನು ಮುಂಜಾಗ್ರತ ಕ್ರಮವಾಗಿ ಚಿಕಿತ್ಸೆ ನೀಡಲಾಗಿದೆ.
ತಲಮಾರಿ ಗ್ರಾಮದ ಪ್ರೌಢಶಾಲೆಯ ಸಿಬ್ಬಂದಿಗಳ ನಿರ್ಲಕ್ಷದಿಂದ ಹಾಲಿನಲ್ಲಿ ಜಿರಳೆಗಳು ಸಿಕ್ಕಿವೆ. ಪ್ಯಾಕಿಂಗ್ ಮಾಡಲಾಗಿರುವ ಹಾಲಿನ ಪುಡಿಯಲ್ಲಿ ಜಿರಳೆ ಬಂದಿದ್ಯೋ ಅಥವಾ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಪಾತ್ರೆಯಲ್ಲಿ ಇತ್ತು ಎಂಬ ಬಗ್ಗೆ ಪಾಲಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ರಾಹುಲ್ ತುಕಾರಾಂ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
![]() |
![]() |
![]() |
![]() |
![]() |
[ays_poll id=3]