This is the title of the web page
This is the title of the web page
Crime NewsLocal News

ನಿಂತ ಲಾರಿಗೆ 2 ಬೈಕ್ ಡಿಕ್ಕಿಯಾಗಿ : ಓರ್ವ ಯುವಕ‌ ಸಾವು..


K2kannadanews.in

Bikes Lorry Accident ಮಸ್ಕಿ : ರಸ್ತೆ ಬದಿಯಲ್ಲಿ (Road side) ಟೈರ್ ಪಂಚರ್ ಆಗಿ ನಿಂತಿದ್ದ ಲಾರಿಯೊಂದಕ್ಕೆ ಎರಡು ಬೈಕ್ ಗಳ ಡಿಕ್ಕಿ ಹೊಡೆದು ಓರ್ವ ಸ್ಥಳದಲ್ಲಿಯೇ ಮೃತಪಟ್ಟು (Spotdeath), ಮತ್ತೋರ್ವ ಗಂಭೀರವಾಗಿ (Seriously injured) ಗಾಯಗೊಂಡ ಘಟನೆ ಮಸ್ಕಿ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ಮಸ್ಕಿ (Maski) ಪಟ್ಟಣದ ಈಶಾನ್ಯ ಸಾರಿಗೆ ಸಂಸ್ಥೆಯ ಡಿಪೋ (Depo) ಬಳಿ ಘಟನೆ ನಡೆದಿದೆ. ಮಂಜುನಾಥ (Manjunath 30) ಅಪಘಾತದಲ್ಲಿ ಮೃತ ಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಮೃತ ಲಿಂಗಸುಗೂರು (Lingasuguru) ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸಿ. ಗಾಯಗೊಂಡ ಬಾಬು (Babu) ಎಂಬವರನ್ನು ಚಿಕಿತ್ಸೆಗಾಗಿ ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ (Government hospital) ರವಾನಿಸಲಾಗಿದೆ. ಮಂಜುನಾಥ ಮತ್ತು ಬಾಬು ಮಸ್ಕಿಯ ಭ್ರಮರಾಂಭ ಬಾರ್ (Bar) ಆಯಂಡ್ ರೆಸ್ಟೋರೆಂಟ್ (Restaurant) ನಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು.

ಎಂದಿನಂತೆ ಕೆಲಸ ಮುಗಿಸಿಕೊಂಡು (After work) ಸ್ವ ಗ್ರಾಮ ತೆರಳುತ್ತಿದ್ದ ವೇಳೆ, ಮಾರ್ಗ ಮದ್ಯ ಟೈಯರ್ ಪಂಕ್ಚರ್ ಆಗಿ ನಿಂತಿದ್ದ ಲಾರಿಗೆ ಬೈಕ್ ಸವಾರರು ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಸ್ಥಳಕ್ಕೆ ಮಸ್ಕಿ (Mask police) ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ (Case) ದಾಖಲಿಸೊಕೊಂಡಿದ್ದಾರೆ‌.


[ays_poll id=3]