This is the title of the web page
This is the title of the web page
National NewsVideo News

ನೀವು ನೂಡಲ್ಸ್‌ ಪ್ರಿಯರೇ : ಈ ವಿಡಿಯೊ ನೋಡಲೇ ಬೇಕು..!


K2kannadanews.in

Viral Video : ಬೀದಿ ಬದಿ ಆಹಾರ (Road Side Food) ಅದರಲ್ಲೂ ಗೋಬಿ(Gobi), ನೂಡಲ್ಸ್ (Nudals) ಅಂದ್ರೆ ಸಾಕಷ್ಟು ಬಾಯಲ್ಲಿ ನೀರು ತರಿಸುತ್ತೆ. ಸುರಕ್ಷತೆ (Safety) ಮತ್ತು ಶುಚಿತ್ವದ (cleanliness) ಬಗ್ಗೆಯೂ ಪ್ರಶ್ನೆಗಳು ಏಳುತ್ತವೆ. ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲಿ (Social media) ಆಹಾರ ತಯಾರಿಸುವ ವಿಡಿಯೊ ವೈರಲ್‌ (Video viral) ಆಗಿ ಭಯ ಹುಟ್ಟಿಸುತ್ತವೆ. ನೀವು ಬೀದಿ ಬದಿಯ ನೂಡಲ್ಸ್‌ ಇಷ್ಟಪಡುವವರಾಗಿದ್ದರೆ ಈ ವೈರಲ್‌ ವಿಡಿಯೊ (Viral Video)ವನ್ನು ತಪ್ಪದೆ ನೋಡಲೇ ಬೇಕು.

ಈ ವೈರಲ್‌ ವಿಡಿಯೊ ಬೀದಿ ಆಹಾರ ತಯಾರಿಕೆಯ ನೈರ್ಮಲ್ಯದ (Sanitation) ಬಗ್ಗೆ ಅನುಮಾನ (Doubt) ಹುಟ್ಟು ಹಾಕುವಂತಿದೆ. ಇದು ಉತ್ತರ ಪ್ರದೇಶದ (Uthar Pradesh) ಕುಕುರ್ಘಾಟಿ ಗ್ರಾಮದಲ್ಲಿನ ವಿಡಿಯೊ (Video) ಎನ್ನಲಾಗಿದೆ. ಬೀದಿ ಬದಿ ವ್ಯಾಪಾರಿಯೊಬ್ಬರು ನದಿಯಲ್ಲಿ (river) ನೂಡಲ್ಸ್ ತೊಳೆಯುತ್ತಿರುವ ದೃಶ್ಯ ಇದು. ಈ ವಿಡಿಯೊ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗಳನ್ನು (Discussions) ಹುಟ್ಟು ಹಾಕಿದೆ. ಈ ನೀರು ಅತ್ಯಂತ ಕಲುಷಿತವಾಗಿರುವುದೇ ಇದಕ್ಕೆ ಕಾರಣ. ಹೀಗಾಗಿ ಇದು ಆಹಾರ ತಯಾರಿಕೆಯ ವಿಚಾರದಲ್ಲಿ ಕಠಿಣ ಕಾನೂನು ಕ್ರಮಗಳ ಅಗತ್ಯವನ್ನು ಒತ್ತಿ ಹೇಳುತ್ತದೆ. ಜತೆಗೆ ಬೀದಿ ಬದಿ ಆಹಾರ ಸೇವಿಸುವ ಹವ್ಯಾಸವನ್ನು ಮರು ಪರಿಶೀಲಿಸುವಂತೆ ಮಾಡುತ್ತದೆ.

ಕೆಲವು ತಿಂಗಳ ಹಿಂದೆ ಕೋಲ್ಕತ್ತಾದಲ್ಲಿನ (Kolkata) ನೂಡಲ್ಸ್‌  ಫ್ಯಾಕ್ಟರಿಯೊಂದರ (Factory) ವಿಡಿಯೊ ವೈರಲ್‌ ಆಗಿತ್ತು. ನೂಡಲ್ಸ್‌ ತಯಾರಿಸುವ ಎಲ್ಲ ಹಂತವನ್ನು ತೋರಿಸುವ ವಿಡಿಯೊ ಇದಾಗಿತ್ತು. ಇಲ್ಲಿನ ಶುಚಿತ್ವದ ಕೊರತೆ ನೆಟ್ಟಿಗರಲ್ಲಿ ಆಕ್ರೋಶವನ್ನು ಹುಟ್ಟು ಹಾಕಿತ್ತು. ಕಾಮೆಂಟ್ ವಿಭಾಗದಲ್ಲಿ ನೆಟ್ಟಿಗರು ಅಶುದ್ಧ ವಾತಾವರಣದ ಬಗ್ಗೆ ತಮ್ಮ ಆತಂಕಗಳನ್ನು ವ್ಯಕ್ತಪಡಿಸಿದ್ದರು. ಶುಚಿತ್ವ ಇವರ ಪಾಲಿಗೆ ಪಾಪ ಎಂದು ಹಲವರು ಅಭಿಪ್ರಾಯ ಪಟ್ಟಿದ್ದರು.

 


[ays_poll id=3]