
ರಾಯಚೂರು : ಪ್ರೀತಿ ಮಾಡು ಎಂದು ಕಾಡಿಸುತ್ತಿದ್ದ ಹುಡುಗಿಯ ಅಣ್ಣ ಬುದ್ಧಿವಾದ ಹೇಳಲು ಹೋದ ಕಾರಣ ಕೊಲೆಯಾದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ತಂಗಿಗೆ ಮೆಸೇಜ್ ಮಾಡಬೇಡ ಎಂದು ಬುದ್ದಿವಾದ ಹೇಳಲು ಹೋಗಿದ್ದ ಅಣ್ಣ
ದೇವರಾಜ್ (23) ಕೊಲೆಯಾಗಿದ್ದಾನೆ. ಕೊಲೆ ಮಾಡಿದ ಬಸವರಾಜ್, ಕೊಲೆಯಾದ ದೇವರಾಜ್ ತಂಗಿಗೆ ಪ್ರೀತಿ ಮಾಡುವಂತೆ ಕಿರುಕುಳ ನೀಡುತ್ತಿದ್ದ, ಆಕೆಗೆ ಮೆಸೇಜ್ ಮಾಡುವುದು, ಸಿಕ್ಕಲ್ಲೆಲ್ಲ ಅಡ್ಡ ಹಾಕಿ ಮಾತನಾಡಿಸುವುದನ್ನು ಮಾಡುತ್ತಿದ್ದ. ಹೀಗಾಗಿ ದೇವರಾಜ್ ಕರೆದು ಬುದ್ಧಿ ಹೇಳಿ ಬೈದು ಕಳಿಸಿದ್ದ
ಬುದ್ಧಿ ಮಾತಿನಿಂದ ಅಸಮಾಧಾನಗೊಂಡ ಬಸವರಾಜ್ ಸೇಡು ತೀರಿಸಿಕೊಳ್ಳಲೆಂದು, ತನ್ನ ಸ್ನೇಹಿತ ಲಿಂಗಣ್ಣ ಎಂಬಾತನ ಮೊಬೈಲ್‌ನಿಂದ ಮತ್ತೆ ಯುವತಿಗೆ ಮೇಸೆಜ್ ಮಾಡಿದ್ದ, ಇದರಿಂದ ಸಿಟ್ಟಿಗೆದ್ದ ದೇವರಾಜ್ ಈ ವಿಚಾರದ ಬಗ್ಗೆ ಮಾತಾನಾಡಲು ಹೋದಾಗ ಬಸವರಾಜ್ ಕಡೆಯವರ ಮಧ್ಯೆ ಗಲಾಟೆ ನಡೆದಿದೆ. ಈ ಗಲಾಟೆಯಲ್ಲಿ ಬಸವರಾಜ್, ದೇವರಾಜ್‌ಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ಆರೋಪಿಗಳಾದ ಬಸವರಾಜ್ ಹಾಗೂ ಹನುಮಂತ ಎಂಬಾತನಿಗೂ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]