This is the title of the web page
This is the title of the web page
Local News

ರೈತರು ಸಾಲಕಟ್ಟೆದಿದ್ದರೆ ಕಾನೂನು ಕ್ರಮ


ರಾಯಚೂರು : ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಲ್ಲಿ 1 ಸಾವಿರಕ್ಕೂ ಹೆಚ್ಚು ರೈತರಿಗೆ ಸಾಲವನ್ನು ನೀಡಲಾಗಿದೆ. ರೈತರು ನಿಗದಿತ ಸಮಯದಲ್ಲಿ ಸಾಲ ಮರು ಪಾವತಿಸಬೇಕು ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಸ್.ಎಲ್.ಡಿ. ಬ್ಯಾಂಕ್‌ನ ಜಿಲ್ಲಾ ವ್ಯವಸ್ಥಾಪಕ ವಿಜಯಕುಮಾರ ಹೇಳಿದರು.

ರೈತರಿಗೆ ವಾರ್ಷಿಕ ಶೇ.3 ರ ಅತಿ ಕಡಿಮೆ ಬಡ್ಡಿದರದಲ್ಲಿ ಷರತ್ತುಗಳಿಗೆ ಒಪ್ಪಿ ಸಾಲ ಪಡೆದ ರೈತರು ನಿಗದಿತ ಕಾಲಕ್ಕೆ ಮರುಪಾವತಿ ಮಾಡದೇ ಹೋದರೆ ಅದು 24 ಪ್ರತಿಶತವಾಗಿ ಇದರಿಂದ ರೈತರು ಅನಾವಶ್ಯವಾಗಿ ಆರ್ಥಿಕ ತೊಂದರೆಗಳಿಗೆ ಸಿಲುಕಿಕೊಳ್ಳುವುದಲ್ಲದೆ ಇತರ ರೈತರಿಗೂ ಶೇ.3 ರ ಬಡ್ಡಿದರದಲ್ಲಿ ಸಾಲ ಸಿಗದಂತೆ ಮಾಡುತ್ತಾರೆ. ರಾಯಚೂರು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನಲ್ಲಿ ಮಾ.31.2022 ರ ವೇಳೆಗೆ 1179 ಸದಸ್ಯರಿಗೆ ಸಾಲ ವಿತರಿಸಿದ್ದು, 259 ಲಕ್ಷ ರೂ. ಬಾಕಿ ಬರುವುದಿದೆ ಎಂದು ಸಾಲ ವಸೂಲಾತಿ ಶೇ.10.53 ಆಗಿದೆ ಕ್ರೋಢೀಕೃತ ನಷ್ಟವು 1622.27 ಲಕ್ಷ ರೂ.ಗಳಾಗಿವೆ ಎಂದು ಅಂಕಿ ಅಂಶ ಒದಗಿಸಿದರು.

ಆದ್ದರಿಂದ ಸಾಲ ಪಡೆದ ರೈತರು ಯಾರ ಮಾತಿಗೂ ಕಿವಿಗೊಡದೆ ಸಾಲ ಮರುಪಾವತಿಸಬೇಕು ಎಂದರು. ಸಾಲ ಮರುಪಾವತಿಯಾದಷ್ಟು ಬ್ಯಾಂಕ್ ಬಲಿಷ್ಠವಾಗುತ್ತ ಸಾಗುತ್ತವೆ ಹಾಗೂ ಇತರ ರೈತರಿಗೂ ಸಾಲ ಸೌಭ್ಯ ದೊರೆತಂತಾಗುತ್ತದೆ. ಸಹಕಾರಿ ಬ್ಯಾಂಕ್‌ನಲ್ಲಿ ಸಾಲ ಪಡೆದವರು ಶಕ್ತರಾಗಿದ್ದಲ್ಲಿ ಅವರ ಸಾಲವನ್ನು ಮರುಪಾವತಿ ಮಾಡಬೇಕು. ಇತರರ ಮಾತುಗಳನ್ನು ನಂಬಿ ಆರ್ಥಿಕ ಹೊರೆ ಮಾಡಿಕೊಳ್ಳಬಾರದು. ಕೊಟ್ಟ ಸಾಲವನ್ನು ಕೊಡಿ ಎಂದು ಕಾನೂನು ಕ್ರಮಗಳನ್ನು ಜಾರಿಗೆ ತಂದರೆ ಅದನ್ನು ಕಿರುಕುಳವೆಂದು ಭಾವಿಸಿದರೆ ಹೇಗೆ? ಸಾಲ ಪಡೆದು 40 ವರ್ಷಗಳಾದರೂ ಮರುಪಾವತಿ ಮಾಡದಿರುವವರಿಗೆ ಏನು ಮಾಡಬೇಕು ಹೇಳಿ? ಎಂದು ಪ್ರಶ್ನಿಸಿದರು.


[ays_poll id=3]