This is the title of the web page
This is the title of the web page
Local News

ಹಣ್ಣು ಹಂಪಲು ವಿತರಿಸಿ ಡಿಕೆಶಿ ಜನ್ಮದಿನ ಆಚರಣೆ..


K2kannadanews.in

DK’s birthday ಸಿಂಧನೂರು : ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕ್ ಕಾಂಗ್ರೆಸ್ ಸಮಿತಿ ವತಿಯಿಂದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಶ್ರೀ ಡಿಕೆ ಶಿವಕುಮಾರ್ ಅವರ 62ನೇ ಹುಟ್ಟುಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ಹಂಚುವ ಮೂಲಕ ಹುಟ್ಟುಹಬ್ಬ ಆಚರಣೆ ಮಾಡಲಾಯಿತು.

ಹೌದು ರಾಯಚೂರು ಜಿಲ್ಲೆಯ ಸಿಂಧನೂರು ನಗರದ ತಾಲೂಕ್ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ಶ್ರೀ ಬಸನಗೌಡ ಬಾದರ್ಲಿ ಅವರ ನೇತೃತ್ವದಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಕರ್ನಾಟಕ ಸರಕಾರದ ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಅವರ 62ನೇ ಹುಟ್ಟು ಹಬ್ಬದ ಪ್ರಯುಕ್ತ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತ ಹಣ್ಣು, ಹಂಪಲು ಮತ್ತು ಹಾಲು ನೀಡುವುದರ ಮೂಲಕ ಶ್ರೀ ಡಿ ಕೆ ಶಿವಕುಮಾರ್ ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು..
ಒಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸೋಮನಗೌಡ ಬಾದರ್ಲಿ ಆರ್ ಡಿ ಸಿ ಸಿ ನಿರ್ದೇಶಕರು ಮಾತನಾಡಿ ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರ ಹುಟ್ಟುಹಬ್ಬವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಆಚರಣೆ ಮಾಡಿದ್ದೇವೆ ದೇವರು ಅವರಿಗೆ ಆಯಸ್ಸು ಆರೋಗ್ಯ ಕೊಡಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪಸ್ಥಿತರಾದ ಶಿವಕುಮಾರ್ ಜವಳಿ ಅಧ್ಯಕ್ಷರು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಶರಣಯ್ಯ ಕೋಟೆ, ಅಮರೇಶ್ ಗಿರಿಜಾಲಿ, ಹಬೀಬ್ ಖಾಜಿ, ಹನುಮಂತ ಕರ್ನಿ, ಯುಸೂಫ್ ಯಾತ್ಮರಿ, ನಾನೀರೆಡ್ಡಿ, ಶಹಬಾಜ್, ಚನ್ನಬಸವ ಮುಳ್ಳೂರು, ಬಸವರಾಜ್ ಜಲವಾಡಗಿ, ವೀರೇಶ್ ಉಪ್ಪಲದೊಡ್ಡಿ, ಸಂತೋಷ್ ಹುಡಾ, ಬಸವರಾಜ್ ಹರಪೂರ್, ರಫಿ, ಜಾವೀದ್, ಸುದೀಪ್, ಆರಿಫ, ಇಜಾಜ್ ಹಾಗೂ ಇತರರು ಉಪ್ಥಿತರಿದ್ದರು.


[ays_poll id=3]