ಬಂಜೆತನ ನಿವಾರಣೆ ಕುರಿತು ಸಮಾವೇಶ
![]() |
![]() |
![]() |
![]() |
![]() |
ರಾಯಚೂರು : ಬೆಟ್ಟದೂರು ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಬಂಜೆತನ ನಿವಾರಣೆ ವಿಚಾರವಾಗಿ ಚರ್ಚಿಸಲು ಸಮಾವೇಶವನ್ನು ಆಯೋಜನೆ ಮಾಡಲಾಗಿದೆ ಎಂದು ಬೆಟ್ಟದೂರು ಆಸ್ಪತ್ರೆಯ ವೈದ್ಯರಾದ ಡಾಕಯ. ಜೈಪ್ರಕಾಶ್ ಪಾಟೀಲ್ ಅವರು ಹೇಳಿದರು.
ಎರಡು ದಿನಗಳ ಸಮಾವೇಶದಲ್ಲಿ ವಿಶೇಷವಾಗಿ ಬೆಟ್ಟದೂರು ಆಸ್ಪತ್ರೆಯಲ್ಲಿ ಮೊದಲ ದಿನ ತ್ರೀಡಿ ಲ್ಯಾಪ್ರೋಸ್ಕೋಪಿ ಶಸ್ತ್ರ ಚಿಕಿತ್ಸೆಗಳನ್ನು ಆಯೋಜನೆ ಮಾಡಲಾಗಿದ್ದು, ಇದರ ವಿಶೇಷತೆ ಏನು ಎಂದರೆ ಈ ಒಂದು ಸಮಾವೇಶದಲ್ಲಿ ಭಾಗವಹಿಸುವ ಎಲ್ಲಾ ವೈದ್ಯರುಗಳು ಕೂಡ ಈ ಒಂದು ಶಸ್ತ್ರ ಚಿಕಿತ್ಸೆಯ ನೇರ ಪ್ರಸಾರವನ್ನು 3ಡಿಯಲ್ಲಿಯೇ ನೋಡುವಂತಹ ಒಂದು ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು. ಈ ಒಂದು ಸಮಾವೇಶ ರಾಯಚೂರಿನಲ್ಲಿ ಮೊಟ್ಟಮೊದಲ ಬಾರಿಗೆ ಆಗುತ್ತಿದ್ದು, ನೇರ ತ್ರೀಡಿ ವೀಕ್ಷಣೆ ವ್ಯವಸ್ಥೆ ಕೂಡ ಈ ಭಾಗದಲ್ಲಿ ಮೊದಲ ಬಾರಿಗೆ ಆಗುತ್ತಿದೆ ಎಂದು ಹೇಳಿದರು.
ಈ ಒಂದು ಸಮಾವೇಶದ ಎರಡನೇ ದಿನ ಬಂಜೆತನ ನಿವಾರಣೆಗಾಗಿ ಯಾವ ರೀತಿಯಾದಂತಹ ಒಂದು ಕ್ರಮಗಳನ್ನು ಕೈಗೊಳ್ಳಬೇಕು, ಎಂಬ ಬಗ್ಗೆ ಎಲ್ಲಾ ವೈದ್ಯರು ಗೋಷ್ಟಿ ಗಳ ಮುಖಾಂತರ ಚರ್ಚೆ ಮಾಡಲಾಗುತ್ತದೆ ಎಂದು ಹೇಳಿದರು. ಇನ್ನು ಈ ಒಂದು ಸಮಾವೇಶವನ್ನ ನಾವು ಅಂದುಕೊಂಡದ್ದಕ್ಕಿಂತ ಹೆಚ್ಚಿನ ರೀತಿಯಲ್ಲಿ ಯಶಸ್ವಿಯಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಕಾರಣ ನಾವು ಈ ಒಂದು ಸಮಾವೇಶದಲ್ಲಿ 100 ರಿಂದ 150 ಜನ ಭಾಗವಹಿಸಬಹುದು ಎಂದು ಅಂದಾಜಿಸಿದ್ದೆವು. ಆದರೆ ಇದೀಗ ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಿಂದಲೂ ಕೂಡ ವೈದ್ಯರು ಭಾಗವಹಿಸುತ್ತಿದ್ದು, ಒಟ್ಟಾರೆ 250ಕ್ಕೂ ಹೆಚ್ಚು ವೈದ್ಯರು ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.
![]() |
![]() |
![]() |
![]() |
![]() |