This is the title of the web page
This is the title of the web page
Local NewsVideo News

ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ ಮಾಡಿದ ನಾರಿಮಣಿಯರು..


K2kannadanews.in

Protested for water ರಾಯಚೂರು : ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ನೀರು ನಿರ್ವಹಣೆಯಾಗದೆ, ಎಂಟು ದಿನಗಳಿಂದ ನೀರು ಪೂರೈಕೆ ಮಾಡದ್ದರಿಂದ ನಿವಾಸಿಗಳು ಅಸಮಧಾನಗೊಂಡು ಇಂದು ಖಾಲಿ ಬಿಂದಿಗೆ ಹಿಡಿದು ಜಿಲ್ಲಾಧಿಕಾರಿ ಮನೆ ಮುಂದೆ ಪ್ರತಿಭಟನೆಗೆ ಮುಂದಾಗಿದ್ದಾರೆ.

ರಾಯಚೂರು ನಗರದ ವಾರ್ಡ ನಂಬರ್ 16 ತಿಮ್ಮಾಪುರ ಪೇಟೆ, ಜಹಿರಾಬಾದ್‌ ಸೇರಿ ಹಲವು ಬಡಾವಣೆ ನಿವಾಸಿಗಳು, ನಗರಸಭೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು ಸಮರ್ಪಕವಾಗಿ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿದ್ದಾರೆ. ಅಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿರುವ ಹಿನ್ನೆಲೆ, ನಿರ್ಲಕ್ಷ್ಯವಹಿಸುತ್ತಿರುವ ನಗರಸಭೆ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಟಂಟಂ ಗಳಲ್ಲಿ ಖಾಲಿ ಬಿಂದಿಗೆ ಹಿಡಿದು ಬಂದ ನೂರಾರು ಮಹಿಳೆಯರು, ನಗರಸಭೆ ಕಚೇರಿಯಿಂದ ಕಾಲ್ನಡಿಗೆಯಲ್ಲಿ ಬಂದು ಜಿಲ್ಲಾಧಿಕಾರಿ ಮನೆ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ ಮಹಿಳೆಯರು ಅದಮಧಾನ ಹೊರಹಾಕಿದರು.

ಇನ್ನು ಈ ಒಂದು ಬಡಾವಣೆಗಳಿಗೆ ಸಮಯಕ್ಕೆ ಸರಿಯಾಗಿ ನೀರು ಕೊಡುತ್ತಿಲ್ಲ. ಮಧ್ಯರಾತ್ರಿ 12 ಗಂಟೆ, ಒಂದು, ಎರಡು ಗಂಟೆ, ಮಧ್ಯರಾತ್ರಿ ನೀರು ಬಿಡಲಾಗುತ್ತದೆ. ಆಗಲೂ ಕೇವಲ ಐದತ್ತು ನಿಮಿಷಗಳ ಕಾಲ ನೀರು ಸರಬರಾಜು ಮಾಡುತ್ತಾರೆ. ಆ ನೀರನ್ನ ಹಿಡಿದಿಟ್ಟುಕೊಳ್ಳುವುದು ಹೇಗೆ, ಅಲ್ಲದೇ ಶುದ್ದವಾದ ನೀರನ್ನು ಸಹ ಸರಬರಾಜು ಮಾಡುತ್ತಿಲ್ಲ. ನೀರಿನಲ್ಲಿ ಹುಳುಗಳು ಬರುತ್ತವೆ ಅಂತ ಮಹಿಳೆಯರು ಅಸಮಧಾನ ಹೊರಹಾಕಿದ್ದಾರೆ.

ಒಟ್ಟಾರೆಯಾಗಿ ನೀರಿನ ಸಮಸ್ಯೆಯಿಂದ ತಾಳ್ಮೆ ಕಳೆದುಕೊಂಡ ನಗರವಾಸಿಗಳು, ಇಂದು ಖಾಲಿ ಕೂಡ ಹಿಡಿದು ಪ್ರತಿಭಟನೆಗೆ ಮುಂದಾಗಿದ್ದು ಎಲ್ಲರ ಗಮನ ಸೆಳೆದಿತ್ತು. ಇನ್ನು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ನೀರು ಕೊಡುವ ಭರವಸೆ ನೀಡಿದ ಬಳಿಕ ಹೋರಾಟ ಕೈ ಬಿಟ್ಟರು.


[ays_poll id=3]