This is the title of the web page
This is the title of the web page
Crime NewsLocal NewsVideo News

ಕ್ರೀಮ್ ಬನ್ ಖಾಲಿ ಎಂದಿದ್ದಕೆ ಪುಂಡರು ಮಾರಕಾಸ್ತ್ರಗಳಿಂದ ದಾಳಿ..


K2kannadanews.in

Crime news ಲಿಂಗಸುಗೂರು : ಬೇಕರಿಯಲ್ಲಿ (Bakery) ಕ್ರೀಮ್ ಬನ್ (cream bun), ಪಫ್ (paff) ಖಾಲಿಯಾಗಿದೆ ಎಂದಿದ್ದಕ್ಕೆ ಪುಂಡರು ಮಾರಕಾಸ್ತ್ರಗಳಿಂದ ಬೇಕರಿ ದ್ವಂಸಗೊಳಿಸಿ ಕೆಲಸಗಾರರ ಮೇಲೆ ಹಲ್ಲೆ (attack) ಮಾಡಿದ ಘಟನೆ ಲಿಂಗಸುಗೂರು ಪಟ್ಟಣದಲ್ಲಿ ನಡೆದಿದೆ.

ಹೌದು ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuguru) ಪಟ್ಟಣದ ಬಸವಸಾಗರ (basava sagar) ವೃತ್ತದ ವಿ.ಬಿ ಕೇಕ್ ಕಾರ್ನರ್ ಬೇಕರಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಕಿಡಗೇಡಿಗಳು ಗ್ಲಾಸ್ ಕೌಂಟರ್ (counter) ಧ್ವಂಸ ಮಾಡಿ ಲಕ್ಷಾಂತರ ಮೌಲ್ಯದ ವಸ್ತು ಮತ್ತು ಸಾಮಾಗ್ರಿ ನಷ್ಟ ಮಾಡಿದ್ದಾರೆ. ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಕಿಡಗೇಡಿಗಳು ಕೆಲ ತಿನಿಸುಗಳನ್ನು ತಿಂದಿದ್ದಾರೆ. ಕುಡಿದ (drank) ಮತ್ತಿನಲ್ಲಿ ಇದ್ದ ಯುವಕರ (youth) ತಂಡ ಕ್ರೀಮ್ ಬನ್ ಮತ್ತು ಪಫ್ ಕೇಳಿದ್ದಾರೆ ಅದು ಖಾಲಿಯಾಗಿದೆ ಎಂದು ಹೇಳಲಾಗಿದೆ. ಬೆರೆ ಬೇರೆ ತಿನಿಸುಗಳನ್ನು ತಿಂದಿದ್ದಾರೆ ಹಣ (money) ಪಾವತಿಸುವಂತೆ ಕೇಳಿದ್ದಕ್ಕೆ ನಾವು ಸ್ಥಳೀಯರು ನಮ್ಮನ್ನೇ ಹಣ ಕೇಳುತ್ತೀಯಾ ಎಂದು ಜಗಳ ಮಾಡಿ ಕಲ್ಲುಗಳಿಂದ ಕೌಂಟರ್ ಸೇರಿ ಕೇಕುಗಳನ್ನು (cakes) ಇರಿಸಿದ್ದ ಗಾಜಿನ ಸಾಮಾಗ್ರಿಗಳನ್ನು ಧ್ವಂಸ್ ಮಾಡಿದ್ದು, ಅಂದಾಜು 20 ಲಕ್ಷದಷ್ಟು ಹಾನಿ ಮಾಡಿದ್ದಾರೆ ಎಂದು ಮಾಲಿಕರು ಮಾಹಿತಿ ನೀಡಿದ್ದಾರೆ.

ಬೇಕರಿ ಮಾಲೀಕ ಶರತ್ ಹಾಗೂ ಕೆಲಸಗಾರರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಪೊಲಿಸ್ ಕೇಸ್ ಮಾಡಿದರೆ ಜೀವ ತೆಗೆಯುತ್ತೇವೆ (life threat) ಎಂದು ಬೆದರಿಕೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ (police) ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹೆಸರು ಗೊತ್ತಿಲ್ಲ, ಆದರೆ ಆರೋಪಿಗಳನ್ನು ಗುರುತು ಹಿಡಿಯುತ್ತೇವೆ ಎಂದು ಶರತ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳಿ ಮಾಹಿತಿ ಪಡೆದಿದ್ದು ಆರೋಪಗಳನ್ನು ಬಂಧಿಸಿ ಕ್ರಮ ಕೈಕೊಳ್ಳುವ ಭರವಸೆ ನೀಡಿದ್ದಾರೆ.

 


[ays_poll id=3]