This is the title of the web page
This is the title of the web page
State News

ಶೀಘ್ರದಲ್ಲೆ ರಾಜ್ಯದ 2 ಗ್ರಾ.ಪಂಗೆ ಒಂದು ಪಬ್ಲಿಕ್ ಸ್ಕೂಲ್ ಆರಂಭ


K2kannadanews.in

Public school : ರಾಜ್ಯದ ಸರಕಾರಿ ಶಾಲೆಗಳಲ್ಲಿಯೇ (Government school) ಶಿಕ್ಷಕರ ಕೊರತೆ (Teacher’s Problem) ಇದೆ. ಈ ಮಧ್ಯೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ರಾಜ್ಯದ ಎರಡು ಗ್ರಾಮ ಪಂಚಾಯತ್‌ಗೆ ಒಂದರಂತೆ ಕೆಪಿಎಸ್‌ ಶಾಲೆಗಳನ್ನು(KPS) ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಆರಂಬಿಸಿರುವ ಕರ್ನಾಟಕ ಪಬ್ಲಿಕ್‌ ಸ್ಕೂಲ್‌(Karnataka Public school) ಯಶಸ್ವಿಯಾದ ಹಿನ್ನೆಲೆ, ರಾಜ್ಯದಲ್ಲಿ ಈ ಶಾಲೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ರಾಜ್ಯದ ಎರಡು ಗ್ರಾಮ ಪಂಚಾಯತ್‌ಗೆ ಒಂದರಂತೆ ಕೆಪಿಎಸ್‌ ಶಾಲೆಗಳನ್ನು ಆರಂಭಿಸಲಾಗುವುದು. ಈ ಮೂಲಕ ಮುಂದಿನ ಮೂರು ವರ್ಷದೊಳಗೆ ರಾಜ್ಯದಲ್ಲಿ 3 ಸಾವಿರ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಪ್ರಾರಂಭಿಸಲಾಗುವುದು. ಈಗಿರುವ ಅಂದಾಜು 300 ಕೆಪಿಎಸ್‌ಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಮಾರ್ಚ್‌ ಅಂತ್ಯದೊಳಗೆ ಪ್ರತ್ಯೇಕವಾಗಿ 500 ಶಾಲೆಗಳನ್ನು ಕೆಪಿಎಸ್‌ಗಳನ್ನಾಗಿ ಮೇಲ್ದರ್ಜೆಗೇರಿಸುವ ಗುರಿ ಇದೆ ಎಂದು ತಿಳಿಸಿದ್ದಾರೆ.


[ays_poll id=3]