This is the title of the web page
This is the title of the web page
Politics NewsState News

ವಿಪಕ್ಷದವರು ಗೂಂಡಾಗಳು ಎಂದ ಸಿದ್ದರಾಮಯ್ಯ..?


K2kannadanews.in

opposition are hooligans : ಮುಖ್ಯಮಂತ್ರಿ (CM) ಸಿದ್ದರಾಮಯ್ಯನವರ ನಡವಳಿಕೆ ಇಂದು ಅತ್ಯಂತ ಆಕ್ಷೇಪಾರ್ಹವಾಗಿತ್ತು (objectionable) ಎಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ (Opposition leader) ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದರು. ಸಿದ್ದರಾಮಯ್ಯ ಅವರು ವಿಧಾನ ಪರಿಷತ್‌ ನಲ್ಲಿ ಮಾತನಾಡುವ ವೇಳೆ ವಿಪಕ್ಷದವರು ಗೂಂಡಾಗಳು ಎಂದು ವಾಗ್ದಾಳಿ ನಡೆಸಿದ್ದು ಸರಿಯಲ್ಲ ಎಂದು ಆರೋಪಿಸಿದರು.

ಸಿದ್ದರಾಮಯ್ಯ (Siddaramayya) ಅವರ ಮಾತಿನಿಂದ  ಸದನದಲ್ಲಿ (Session) ಗದ್ದಲ ಏರ್ಪಟ್ಟು, ಬಿಜೆಪಿ (BJP) ಸದಸ್ಯರು ಸಭಾತ್ಯಾಗ ಮಾಡಿದ್ದಾರೆ. ಇನ್ನೂ ಸಭಾ ತ್ಯಾಗದ ಬಳಿಕ ವಿಧಾನಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ನಾಲ್ಕರಿಂದ ಐದು ನಿಮಿಷದ ಮಿತಿ ಉಳ್ಳ ಪ್ರಶ್ನೆಗೆ ಸಂಬಂಧಿಸಿ ಮಾತನಾಡಿದ ಮುಖ್ಯಮಂತ್ರಿಗಳು ಕೇಂದ್ರ ಸರಕಾರವನ್ನು (Central Government) ಸುದೀರ್ಘವಾಗಿ ಟೀಕಿಸಿದ್ದಾರೆ.

ಗಂಟೆಗಟ್ಟಲೆ ಕೇಂದ್ರ ಸರಕಾರವನ್ನು ಟೀಕಿಸಿದ್ದು, ನಾವು ಆಕ್ಷೇಪಿಸಿದ್ದೇವೆ. ಆದರೆ, ನಮ್ಮ ಆಕ್ಷೇಪಕ್ಕೆ ಉತ್ತರಿಸುವುದನ್ನು ಬಿಟ್ಟ ಸಿಎಂ ಅವರು ಸದನದಲ್ಲಿ ಇದ್ದ ಎಲ್ಲ ವಿಪಕ್ಷಗಳನ್ನು (All party) ಗೂಂಡಾಗಳು ಎಂದಿದ್ದಾರೆ ಎಂದು ವಿವರಿಸಿದರು. ಛೀ, ಛೀ ಎಂಬಿತ್ಯಾದಿ ಅತ್ಯಂತ ಕಠಿಣ ಕೆಟ್ಟ ಶಬ್ದಗಳನ್ನು (Bad words) ಅವರು ಬಳಸಿದ್ದಾರೆ ಎಂದು ಆರೋಪಿಸಿ ಎಲ್ಲಾ ಬಿಜೆಪಿ ನಾಯಕರು ಸಭಾ ತ್ಯಾಗ ಮಾಡಿದರು.


[ays_poll id=3]