This is the title of the web page
This is the title of the web page
Crime NewsNational News

ಗರ್ಭಿಣಿ ನಾಯಿಯ ಮೇಲೆ ಅತ್ಯಾಚಾರ : ಮೂರನೆ ಮಹಡಿಯಿಂದ ಎಸೆದ..?


K2 ಕ್ರೈಂ ನ್ಯೂಸ್ : ಪ್ರಸ್ತುತ ದಿನಗಳಲ್ಲಿ ಕಾಮುಕರ ಅಟ್ಟಹಾಸ ಮಿತಿಮೀರಿ ಹೋಗಿದೆ. ಕಾಮಾಂಧರು ಮೂಕ ಪ್ರಾಣಿಗಳ ಮೇಲೆಯು ಅತ್ಯಾಚಾರ ಮಾಡುತ್ತಿರುವುದು, ನಿಜಕ್ಕೂ ಅಮಾನವೀಯ ಮತ್ತು ಮಾನವ ಸಂಕುಲ ತಲೆತಗ್ಗಿಸುವ ಕೆಲಸವಾಗಿದೆ. ಇಲ್ಲೊಂಬ್ಬ ಕಾಮಾಂಧ ಗರ್ಭಿಣಿ ನಾಯಿಯ ಮೇಲೆ ಅತ್ಯಾಚಾರ ಎಸೆಗಿದ್ದಲ್ಲದೆ, 3ನೇ ಮಹಡಿಯ ಬಾಲ್ಕನಿಯಿಂದ ಎಸೆದಿರುವ ಅಮಾನವೀಯ ಘಟನೆ ನೋಯ್ಡಾದಲ್ಲಿ ನಡೆದಿದೆ.

ಘಟನೆಯು ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದ್ದು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈ 28ವರ್ಷದ ಯುವಕ ಪ್ರತಿದಿನ ಕುಡಿದು ಮನೆಗೆ ಬರುತ್ತಿದ್ದ. ಕುಡಿದ ನಶೆಯಲ್ಲಿ ಹೆಣ್ಣು ನಾಯಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಪಕ್ಕದ ಮನೆಯವರು ಏನು ಮಾಡುತ್ತಿದ್ದೀರಿ ಎಂದು ಜೋರಾಗಿ ಕೂಗಿದ್ದಕ್ಕೆ ಆರೋಪಿಯು ಗಾಬರಿಗೊಂಡು ನಾಯಿಯನ್ನು ಮೂರನೇ ಮಹಡಿಯಲ್ಲಿರುವ ಬಾಲ್ಕನಿಯಿಂದ ನೆಲಕ್ಕೆ ಎಸೆದಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಬೀಟಾ 2 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಕೀಲ ವಿಶಾಲ್ ಗೌತಮ್ ಎಂಬುವವರು ಸಾಮಾಜಿಕ ಜಾಲಾತಾಣದಲ್ಲಿ ಈ ಕೃತ್ಯದ ಬಗ್ಗೆ ಫೋಟೋವನ್ನ ಶೇರ್‌ ಮಾಡಿಕೊಂಡಿದ್ದಾರೆ.


[ays_poll id=3]