ಸಿಂಧನೂರು : ಐದು ಬಾರಿ ಶಾಸಕರಾಗಿರುವ ಹಂಪನಗೌಡ ಬಾದರ್ಲಿ ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಾದಯಾತ್ರೆ ಯನ್ನು ನಡೆಸಿದರು. ಶುಕ್ರವಾರ 10 ಗಂಟೆಗೆ ನಗರದ ಎಪಿಎಂಸಿ ಗಣೇಶ ದೇವಸ್ಥಾನ ದಿಂದ ಪ್ರಾರಂಭವಾದ ಪಾದಯಾತ್ರೆ ಹೊಸಳ್ಳಿಕ್ಯಾಂಪ್, ಶ್ರೀ ಪರುಂ ಜಂಕ್ಷನ್ ಗೋರೆಬಾಳ, ಬಂಗಾರಿ ಕ್ಯಾಂಪ್ ಮೂಲಕ ಶಕ್ತಿ ಪೀಠ ಅಂಬಾಮಠಕ್ಕೆ ಬೃಹತ್ ಪಾದಯಾತ್ರೆ ಹಮ್ಮಿಕೊಂಡು ಈ ಬಾರಿ ಹಂಪನಗೌಡ ಬಾದರ್ಲಿ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಕೊಡಬೇಕು ಎಂದು ಕೂಗುತ್ತಾ ಆಗ್ರಹಿಸಿದರು. ಪಾದಯಾತ್ರೆ ಸಿದ್ದಿ ಪರ್ವತ ಅಂಬಮಠಕ್ಕೆ ತಲುಪಿತು ಈ ವೇಳೆ ಅಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ತದನಂತರ ಸಾವಿರದ ಒಂದು ತೆಂಗಿನಕಾಯಿ ಒಡೆದು ದೇವರಲ್ಲಿ ಹರಕೆ ಹೊತ್ತರು.