This is the title of the web page
This is the title of the web page
Local News

ನಗರ ಸಭೆ ನಿರ್ಲಕ್ಷ್ಯ: ಸಂಚಾರಿ ಪೊಲೀಸರ ಕಾರ್ಯಕ್ಕೆ ಶ್ಲಾಘನೆ


ರಾಯಚೂರು : ಸಂಚಾರಿ ಪೊಲೀಸರ ನೇತೃತ್ವದಲ್ಲಿ ಇಂದು ನಗರದ ವಿವಿಧಡೆ ಫುಟ್ಪಾತ್ ತೆರವು ಕಾರ್ಯಾಚರಣೆ ನಡೆಯಿತು.

ನಗರದ ಗೀತಾ ಮಂದಿರ್ ಮತ್ತು ಬಂಗಾರ ಬಜಾರ್ ಗೆ ತೆರಳುವ ರಸ್ತೆಯಲ್ಲಿ ಫುಟ್ಪಾತ್ ಅಂಗಡಿಗಳು ಸೇರಿ ವಿವಿಧ ತೆರವು ಕಾರ್ಯವನ್ನು ಮಾಡಲಾಯಿತು. ಆದರೆ ನಗರಸಭೆಯಿಂದ ಮಾಡಬೇಕಾದಂತಹ ಈ ಒಂದು ತೆರವು ಕಾರ್ಯಾಚರಣೆಗೆ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸಮನ್ವಯತೆ ಕೊರತೆಯಿಂದ, ಯಾವೊಬ್ಬ ನಗರಸಭೆ ಸಿಬ್ಬಂದಿಯ ಸ್ಥಳಕ್ಕೆ ಆಗಮಿಸದೆ, ಕೇವಲ ಸಂಚಾರಿ ಪೊಲೀಸರು ಮಾತ್ರ ಈ ಒಂದು ತೆರವು ಕಾರ್ಯಾಚರಣೆ ಕಾರ್ಯ ಮಾಡಿದರು.

ಸಂಚಾರಿ ಪೊಲೀಸರು ನಗರಸಭೆ ಅಧಿಕಾರಿಗಳಿಗೆ ಕರೆ ಮಾಡಿದರೆ, ಒಬ್ಬರ ಮೇಲೊಬ್ಬರು ದೂರುವ ಕೆಲಸ ಮಾಡಿದರೆ ಹೊರತು ಸ್ಥಳಕ್ಕೆ ಯಾವೊಬ್ಬ ಅಧಿಕಾರಿಯಾಗಲಿ ಸಿಬ್ಬಂದಿಯಾಗಲಿ ಆಗಮಿಸಲಿಲ್ಲ.


[ays_poll id=3]